ಗೋಣಿಕೊಪ್ಪ ನಗರ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಗೋಣಿಕೊಪ್ಪ: ನಗರ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಕುಲ್ಲಚಂಡ ಪ್ರಮೋದ್ ಗಣಪತಿ ಅವರ ನೇತೃತ್ವದಲ್ಲಿ ಸ್ವಾತಂತ್ರ ದಿನಾಚರಣೆ ಆಚರಣೆ ನಡೆಸಲಾಯಿತು. ಧ್ವಜಾರೋಹಣವನ್ನು ಗೋಣಿಕೊಪ್ಪಲು ನಗರ ಕಾಂಗ್ರೆಸ್ ಹಿರಿಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಟ್ರಸ್ಟ್ ನ ಸಂಚಾಲಕರಾದ ಅಜಿತ್ ಅಯ್ಯಪ್ಪ ಅವರು ನೆರವೇರಿಸಿದರು. ಮುಖ್ಯ ಭಾಷಣವನ್ನು ಸಮೀರ್ ಅವರು ನೆರವೇರಿಸಿದರು.
ಗೋಣಿಕೊಪ್ಪಲು ನಗರ ಕಾಂಗ್ರೆಸ್ ಉಪಾಧ್ಯಕ್ಷರಾಸ ನಾಯಂದಿರ ಶಿವಾಜಿ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಂಜುಳಾ, ಗೋಣಿಕೊಪ್ಪಲು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಅಂಶಿಫ್, ಗ್ರಾಮ ಪಂಚಾಯಿತಿ ಸದಸ್ಯರಾದ ಚೆಪ್ಪುದ್ದಿರ ಧ್ಯಾನ್ ದೇವಯ್ಯ , ಗ್ರಾಮ ಪಂಚಾಯತಿ ಸದಸ್ಯರಾದ ಶರತ್ ಕಾಂತ್, ಗ್ರಾಮ ಪಂಚಾಯತಿ ಸದಸ್ಯರಾದ ಅಪ್ಸಲ್, ಪೊನ್ನಂಪೇಟೆ ಕೆಡಿಪಿ ಸದಸ್ಯರಾದ ಅಬ್ದುಲ್ ಸಮ್ಮದ್, ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ರಾಜಶೇಖರ್,ಸಜೀರ್, ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಧನ್ಯ, ಪೂನ್ನಂಪೇಟೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಖಾಲಿದ್, ಯುವ ಕಾಂಗ್ರೆಸ್ ಮುಖಂಡರಾದ ಸಲೀಂ ಪಿಎಂ ಮತ್ತು ಉಪಸ್ಥಿತರಿದ್ದರು..