ಶನಿವಾರಸಂತೆ: ಮಾಜಿ ಸಾ.ರಾ ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಧರ್ಮಸ್ಥಳಕ್ಕೆ ಯಾತ್ರೆ: ಧರ್ಮಸ್ಥಳದ ವಿರುದ್ಧ ಯಾರೇ ಷಡ್ಯಂತ್ರ ನಡೆಸಿದರು ಕೂಡ ಯಶಸ್ಸು ಕಾಣಲ್ಲ: ಸಾ.ರಾ ಮಹೇಶ್

ಶನಿವಾರಸಂತೆ: ಮಾಜಿ ಸಾ.ರಾ ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಧರ್ಮಸ್ಥಳಕ್ಕೆ   ಯಾತ್ರೆ: ಧರ್ಮಸ್ಥಳದ ವಿರುದ್ಧ ಯಾರೇ ಷಡ್ಯಂತ್ರ ನಡೆಸಿದರು ಕೂಡ ಯಶಸ್ಸು ಕಾಣಲ್ಲ: ಸಾ.ರಾ ಮಹೇಶ್

ಶನಿವಾರಸಂತೆ: ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ ಮಹೇಶ್ ಅವರು ಧರ್ಮಸ್ಥಳಕ್ಕೆ ಸುಮಾರು 500ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರೊಂದಿಗೆ ವಾಹನದಲ್ಲಿ ಯಾತ್ರೆ ಕೈಗೊಂಡಿದ್ದಾರೆ‌. ಧರ್ಮಸ್ಥಳಕ್ಕೆ ತೆರಳುವ ಮಾರ್ಗ ಮದ್ಯೆ ಶನಿವಾರಸಂತೆಯಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪುಣ್ಯ ಸ್ಥಳ ಈ ದೇವಾಲಯದ ಬಗ್ಗೆ ಯಾರೇ ಷಡ್ಯಂತರ ನಡೆಸಿದರು ಅದು ನಡೆಯುವುದಿಲ್ಲ. ಈ ಚಿನ್ನಯ್ಯನ ಹಿಂದೆ ಯಾರು ಯಾರು ಇದ್ದಾರೆ ಎಂದು ತನಿಖೆ ಮುಂದುವರಿಯಬೇಕು. SIT ರಚನೆ ಮಾಡುವವರೆಗೆ ಯಾರು ಮಾತನಾಡಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ, ಆದರೆ ಈ ರಚನೆ ಮಾಡಿದ್ದರಿಂದ ಎಲ್ಲಾ ಸತ್ಯ ಸತ್ಯತೆ ಹೊರ ಬರುತ್ತಿದೆ. ನಾನು ಈ ಧರ್ಮಸ್ಥಳದ ಭಕ್ತ ಹಾಗೂ ಒಬ್ಬ ಜನಪ್ರತಿನಿದಿಯಾಗಿ ಈ ಪುಣ್ಯ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ. ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು .ಈ ಸಂದರ್ಭದಲ್ಲಿ ಶನಿವಾರಸಂತೆ ಜೆಡಿಎಸ್ ಪ್ರಮುಖರಾದ ಹರೀಶ್,, ಮೋಹನ್ ಧರ್ಮಪ್ಪ,ಮಹಮ್ಮದ್, ಇದ್ದರು.