ಶ್ರೀ ಧರ್ಮಸ್ಥಳ ದೇವಸ್ಥಾನದ ಕುರಿತು ಅಪಪ್ರಚಾರ ಖಂಡಿಸಿ ಕೊಡ್ಲಿಪೇಟೆಯಲ್ಲಿ ಜನಾಗ್ರಹ ಜಾಥ

ಶ್ರೀ ಧರ್ಮಸ್ಥಳ ದೇವಸ್ಥಾನದ ಕುರಿತು ಅಪಪ್ರಚಾರ ಖಂಡಿಸಿ ಕೊಡ್ಲಿಪೇಟೆಯಲ್ಲಿ ಜನಾಗ್ರಹ ಜಾಥ

ಶನಿವಾರಸಂತೆ:-ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿ ಹಿತರಕ್ಷಣಾ ಸಮಿತಿ ಮತ್ತು ಭಕ್ತಾಧಿಗಳ ವೃಂದ ಕೊಡ್ಲಿಪೇಟೆ ಇವರ ವತಿಯಿಂದ ಹಲವು ದಿನಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಾಲಯ ಹಾಗೂ ಕ್ಷೇತ್ರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ಕಳಂಕ ತರಲು ಒಳಸಂಚು ಮತ್ತು ಅಪಪ್ರಚಾರ ಮಾಡುತ್ತಿರುವರ ವಿರುದ್ದ ಕಠಿಣ ಕ್ರಮಕೈಗೊಂಡು ಸೂಕ್ತ ತನಿಖೆ ನಡೆಸುವ ಕುರಿತು ಗುರುವಾರ ಸಂಜೆ ಜನಾಗ್ರಹ ಜಾಥವನ್ನು ನಡೆಸಲಾಯಿತು.

ಕೊಡ್ಲಿಪೇಟೆಯ ಕಡೆಪೇಟೆ ಗಣಪತಿ ದೇವಸ್ಥಾನದಿಂದ ಕೊಡ್ಲಿಪೇಟೆ ಬಸ್ಸು ನಿಲ್ದಾಣ ವರೆಗೆ ಜಾಥ ಮೂಲಕ ಪ್ರತಿಭಟನೆ ನಡೆಸಿದರು.ಜನಾಗ್ರಹ ಜಾಥದಲ್ಲಿ ಆಯೋಜಕರಾದ ಹರೀಶ್, ಮೋಕ್ಷಿತ್‌ರಾಜ್, ದಯಾನಂದ್, ಆದರ್ಶ, ಅನಿಲ್, ವಿವಿಧ ಮಠಾದೀಶರು ಸೇರಿದಂತೆ ಹಿಂದು ಬಾಂಧವರು, ಸಾರ್ವಜನಿಕರು ಪಾಲ್ಗೊಂಡಿದ್ದರು.