ಜೂನ್‌ 13ರಂದು ಗುಡುಗಳಲೆ‌‌ ಜಾತ್ರಾ ಮೈದಾನದಲ್ಲಿ ಬಸವ ಜಯಂತಿ ಆಚರಣೆ

Jun 8, 2026 - 16:50
 0  169
ಜೂನ್‌ 13ರಂದು ಗುಡುಗಳಲೆ‌‌ ಜಾತ್ರಾ ಮೈದಾನದಲ್ಲಿ ಬಸವ ಜಯಂತಿ ಆಚರಣೆ

ಮಡಿಕೇರಿ: ಜೂ.13ರ ಶನಿವಾರ ಗುಡುಗಳಲೆ ಜಯದೇವ ಜಾತ್ರಾ ಮೈದಾನದಲ್ಲಿ ವೀರಶೈವ ಲಿಂಗಾಯತ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ, ಡಾ.ಶಿವಕುಮಾರ ಮಹಾಸ್ವಾಮಿಗಳ ಜಯಂತಿ, ರೇಣುಕಾಚಾರ್ಯ ಜಯಂತಿ ಹಾಗೂ ಹಾಲೇರಿ ಅರಸರು ಮತ್ತು ಸ್ವಾತಂತ್ರ್ಯ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪ(ಕಲ್ಯಾಣಸ್ವಾಮಿ) ಸಂಸ್ಮರಣೆ ನಡೆಯಲಿದೆ ಎಂದು ಮನೆಹಳ್ಳಿಮಠದ ತಪೋಕ್ಷೇತ್ರ ಮಹಾಂತ ಶಿವಲಿಂಗ ಮಹಾಸ್ವಾಮಿ ತಿಳಿಸಿದ್ದಾರೆ.

ಅಂದು ಬೆಳಗ್ಗೆ ೮ಕ್ಕೆ ಮಧ್ಯಪೇಟೆ ಗಣಪತಿ ದೇವಾಲಯದಿಂದ ಮೆರವಣಿಗೆ ನಡೆಯಲಿದೆ. ೧೧ಕ್ಕೆ ಗಂಟೆಗೆ ಸಭೆ ನಡೆಯಲಿದೆ. ಸಿದ್ಧಗಂಗಾ ಮಠದ ಶಿವ ಸಿದ್ಧೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದು, ಬಿ.ವೈ.ವಿಜಯೇಂದ್ರ ಉದ್ಘಾಟಿಸಲಿದ್ದಾರೆ. ಯದುವೀರ್ ಒಡೆಯರ್, ಡಾಲಿ ಧನಂಜಯ, ಶಂಕರ ಬಿದರಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಎಸ್.ಜಿ.ಸುಶೀಲಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅ.ಭಾ.ವೀ.ಲಿ ಯುವ ಘಟಕ ಅಧ್ಯಕ್ಷ ಮೋಕ್ಷಿತ್ ರಾಜ್, ಪ್ರಮುಖರಾದ ಭರತ್, ಸೋಹನ್, ಸುರೇಶ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0