ನಾಗೇಶ್ ಕಾಲೂರು ಸಂಪಾದಕತ್ವದಲ್ಲಿ ಕೊಡವ ಭಾಷೆಗೆ ಕನಕದಾಸರ ಸಮಗ್ರ ಸಾಹಿತ್ಯ ಕೖತಿ

ನಾಗೇಶ್ ಕಾಲೂರು ಸಂಪಾದಕತ್ವದಲ್ಲಿ ಕೊಡವ ಭಾಷೆಗೆ ಕನಕದಾಸರ ಸಮಗ್ರ ಸಾಹಿತ್ಯ ಕೖತಿ

ಮಡಿಕೇರಿ ಏ 30- ಕೊಡಗಿನ ಹಿರಿಯ ಸಾಹಿತಿ ನಾಗೇಶ್ ಕಾಲೂರು ಕೊಡವ ಭಾಷಾ ಆವೖತ್ತಿಗೆ ಸಂಪಾದಕರಾಗಿರುವ ಕನಕದಾಸರ ಸಮಗ್ರ ಸಾಹಿತ್ಯ ಕೖತಿ ಮೇ 15 ರಂದು ಬೆಂಗಳೂರಿನಲ್ಲಿ ಲೋಕಾಪ೯ಣೆಯಾಗಲಿದೆ.

ಕನಕದಾಸರ ಸಮಗ್ರ ಸಾಹಿತ್ಯವು ಕೊಡವ ಭಾಷೆ ಸೇರಿದಂತೆ ಭಾರತದ 14 ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದಿಂದ ಈ ಕೖತಿಗಳನ್ನು ಪ್ರಕಟಿಸಲಾಗಿದೆ.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು 2013-24 ನೇ ಸಾಲಿನಲ್ಲಿ ಕನಕದಾಸರ ಸಮಗ್ರ ಸಾಹಿತ್ಯವನ್ನು ಕೊಡವ ಸೇರಿದಂತ ಭಾರತದ 14 ಭಾಷೆಗಳಿಗೆ ಅನುವಾದ ಮಾಡುವ ಯೋಜನೆ ಹಮ್ಮಿಕೊಂಡಿತ್ತು. ಪ್ರತೀ ಭಾಷೆಯೂ 3 ಸಂಪುಟಗಳಲ್ಲಿ ಮುದ್ರಣಗೊಂಡಿದೆ. ಕೊಡವ ಮತ್ತು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ವಚನ ಸಾಹಿತ್ಯ ಬಿಟ್ಟರೆ ಇಷ್ಟೂ ಭಾಷೆಗಳಲ್ಲಿ ಕೖತಿಯೊಂದು ಪ್ರಕಟವಾಗಿರುವುದು ಇದೇ ಮೊದಲ.

ಕನಕದಾಸರ ಸಮಗ್ರ ಸಾಹಿತ್ಯ ಕೖತಿ ಯು ಕೊಡವ, ಇಂಗ್ಲೀಷ್, ಹಿಂದಿ, ಬೆಂಗಾಳಿ, ಮರಾಠಿ, ಪಂಜಾಬಿ, ಅಸ್ಸಾಮಿ, ಉದು೯, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಬ್ಯಾರಿ, ತುಳು, ತೆಲುಗು, ಮುಂತಾದ 14 ಭಾಷೆಗಳಲ್ಲಿ ಅನುವಾದಗೊಂಡಿದೆ. ಕೊಡವ ಭಾಷಾ ಕೖತಿಗಳಿಗೆ ಸಂಪಾದಕರಾಗಿ ನಾಗೇಶ್ ಕಾಲೂರು ಕಾಯ೯ನಿವ೯ಹಿಸಿದ್ದು, ಅನುವಾದಕರಾಗಿ ನಾಗೇಶ್ ಕಾಲೂರು, ಬಾಚರಣಿಯಂಡ ಅಪ್ಪಣ್ಣ, ರಾಣುಅಪ್ಪಣ್ಣ, ಮೊಣ್ಣಂಡ ಶೋಭಾ ಸುಬ್ಬಯ್ಯ, ಬಡಕಡಮ್ಮಂಡ ಕಸ್ತೂರಿ ಗೋವಿಂದಮಯ್ಯ, ದಿ. ಮುಲ್ಲೇಂಗಡ ಬೇಬಿ ಚೋಂದಮ್ಮ, ಮುಲ್ಲೇಗಂಡ ರೇವತಿ ಪೂವಯ್ಯ ಕಾಯ೯ನಿವ೯ಹಿಸಿದ್ದಾರೆ.

 ಮೂರು ಸಂಪುಟಗಳ ಪೈಕಿ ಮೊದಲ ಸಂಪುಟದಲ್ಲಿ ಕನಕದಾಸರ 360 ಕೀತ೯ನೆಗಳು ಮತ್ತು ಮುಂಡಿಗೆಗಳು, ಎರಡನೇ ಸಂಪುಟದಲ್ಲಿ ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ನಳಚರಿತ್ರೆ ಕಾವ್ಯಗಳು, ಮೂರನೇ ಸಂಪುಟದಲ್ಲಿ ಮೋಹನ ತರಂಗಿಣಿ ಮಹಾಕಾವ್ಯ ಸಾಹಿತ್ಯಗಳಿವೆ.

ಸಮಗ್ರ ಸಾಹಿತ್ಯ ಶ್ರೇಣಿಯೊಂದು ಅನುವಾದಗೊಂಡು ಕೊಡವ ಭಾಷೆಯಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು. ಕನಕದಾಸರ ಸಮಗ್ರ ಸಾಹಿತ್ಯವನ್ನು ಮೂಲ ಛಂದಸ್ಸಿನಲ್ಲಿಯೇ ಅನುವಾದಗೊಳಿಸಲು ಪ್ರಯತ್ನಿಸಲಾಗಿದ್ದು, ಈ ಅನುವಾದಯೋಜನೆ ಕೊಡವ ಭಾಷಾ ಸಾಹಿತ್ಯ ಲೋಕದಲ್ಲಿ ಒಂದು ಮೈಲುಗಲ್ಲಾಗಿದೆ. ಮೇ 15 ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದ ಸಾಂಸ್ಕೖತಿಕ ಸಮುಚ್ಚಯದಲ್ಲಿ ಸಂಜೆ 5 ಗಂಟೆಗೆ ಕನಕಶಿಲ್ಪವನದ ಲೋಕಾಪ೯ಣೆಯೊಂದಿಗೆ 14 ಕೖತಿಗಳ ಲೋಕಾಪ೯ಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.

 ಈ ಕೖತಿಯ ಅನುವಾದವೇ ಸವಾಲಿನದ್ದಾಗಿತ್ತು. ಕೊಡವ ಭಾಷೆಯಲ್ಲಿನ ಪದಗಳನ್ನು ಮೂಲಕೖತಿಯ ಪದಗಳಿಗೆ ಸರಿಹೊಂದಿಸುವ ಕಾಯ೯ವೇ ಲೇಖಕರಿಗೆ ನಿಜವಾ ಸವಾಲಾಗಿತ್ತು. ಪರಮ ಪುರುಷ ನೀ ನೆಲ್ಲಿಕಾಯಿ ಎಂಬ ಪದವನ್ನು ಕೊಡವ ಭಾಷೆಗೆ ಅನುವಾದ ಮಾಡಲು ಸಾಧ್ಯವೇ ಆಗಲಿಲ್ಲ. ಅಷ್ಟೊಂದು ಶ್ರೀಮಂತ ಸಾಹಿತ್ಯವನ್ನು ಅಂದಿನ ಕಾಲದಲ್ಲಿಯೇ ಕನಕದಾಸರು ಸಾಹಿತ್ಯ ಲೋಕಕ್ಕೆ ನೀಡಿದ್ದರು ಎಂಬುದೇ ಹೆಮ್ಮೆ ಮತ್ತು ಅಚ್ಚರಿಯ ವಿಚಾರ ಎಂದು ಸಂಪಾದಕ ನಾಗೇಶ್ ಕಾಲೂರು ತಿಳಿಸಿದರು.

ಕೊಡವ ಭಾಷಾ ಅನುವಾದಕ್ಕೆ 8 ವಷ೯ಗಳ ಸುಧೀಘ೯ ಅವಧಿ ತಗುಲಿತ್ತು ಎಂದೂ ನಾಗೇಶ್ ತಿಳಿಸಿದರು. ಕೊಡವ ಭಾಷೆಗೆ ಕನಕದಾಸರಂಥ ಮೇರು ವ್ಯಕ್ತಿತ್ವದ ಸಾಹಿತಿಯ ಕೖತಿಯನ್ನು ಅನುವಾದಿಸುವ ಅವಕಾಶದೊಂದಿಗೆ ಮೂರು ಸಂಪುಟಗಳ ಸಂಪಾದಕನಾಗಿ ಕಾಯ೯ನಿವ೯ಹಿಸಿದ್ದು ಜೀವನದ ಸಾಥ೯ಕತೆ ಎಂದೂ ನಾಗೇಶ್ ಕಾಲೂರು ಹೆಮ್ಮೆಯಿಂದ ನುಡಿದರು.

ಕನಕದಾಸರು ಕೊಡಗು ರಾಜ್ಯಕ್ಕೂ ಬಂದಿದ್ದ ಉಲ್ಲೇಖವಿದ್ದು, ಕೊಡಗಿನ ಸಾಮಂತನೋವ೯ ದಂಗೆ ಎದ್ದ ಸಂದಭ೯ ಈ ದಂಗೆಯನ್ನು ಹತ್ತಿಕ್ಕಲು ಕೊಡಗಿಗೂ ಕನಕನಾಯಕ ಬಂದಿದ್ದರು ಎಂಬ ಪ್ರತೀತಿಯಿದೆ. ಇದನ್ನು ಕೂಡ ಕೖತಿಯಲ್ಲಿ ದಾಖಲಿಸಲಾಗಿದೆ ಎಂದು ನಾಗೇಶ್ ಕಾಲೂರು ಮಾಹಿತಿ ನೀಡಿದರು.

ನಾಗೇಶ್ ಕಾಲೂರು ಅವರು 30 ವಷ೯ಗಳಿಂದ ಸಾಹಿತ್ಯ ರಚನೆಯಲ್ಲಿ ಸಕ್ರಿಯರಾಗಿದ್ದು, ಕನ್ನಡ, ಕೊಡವ, ಅರೆಭಾಷೆ ಸೇರಿದಂತೆ ಬಹುಭಾಷಾ ಸಾಹಿತಿಯಾಗಿದ್ದಾರೆ.

 ಸಾಹಿತ್ಯ ರಚನೆಗಾಗಿ ಹಿರಿಯ ನಾಗರಿಕರ ಇಲಾಖೆಯಿಂದ ನೀಡಲ್ಪಡುವ ಸಾಹಿತ್ಯ ಸಾಧನೆಗಾಗಿನ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪಡೆದಿದ್ದು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 14 ನೇ ಸಾಹಿತ್ಯ ಸಮ್ಮೇಳನ ಮತ್ತು ಮಡಿಕೇರಿ ತಾಲೂಕಿನ 5 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾಯ೯ನಿವ೯ಹಿಸಿದ್ದಾರೆ. ಈವರೆಗೆ 30 ಕೖತಿಗಳನ್ನು ನಾಗೇಶ್ ಕಾಲೂರು ರಚಿಸಿದ್ದಾರೆ.