Kodagu

ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

admincoorgdaily

ವಿರಾಜಪೇಟೆ: ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಹಸೈನಾರ್ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಅಧ್ಯಾಪಕರಾದ ಯಾಕೂಬ್ ರಿಜ್ವಿ ಅವರು ಕನ್ನಡ ನಾಡು ಮತ್ತು ನುಡಿಯ ಮಹತ್ವದ ಕುರಿತು ಮಾತನಾಡಿ, ಕನ್ನಡದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಶರೀಫ್ ಅಹ್ಸಾನಿ ಅವರು ಕನ್ನಡ ನಾಡು, ಭಾಷೆ, ಸಂಸ್ಕೃತಿ ಮತ್ತು ಕನ್ನಡದ ಇತಿಹಾಸದ ಕುರಿತು ಮನೋಜ್ಞ ಭಾಷಣ ಮಾಡಿದರು. ಕನ್ನಡ ಅಧ್ಯಾಪಕಿ ಜಯಂತಿ ಮ್ಯಾಡಂ ವಂದನಾರ್ಪಣೆ ನೆರವೇರಿಸಿದರು.

. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.