ಕಾವೇರಿ ತೀರ್ಥೋದ್ಭವ: ನಾಡಿಗೆ ಸಮೃದ್ಧಿ, ಶಾಂತಿ ಮತ್ತು ಸುಖವನ್ನು ತರಲಿ :ಸಚಿವ ಎನ್. ಎಸ್. ಬೋಸರಾಜು

ಕಾವೇರಿ ತೀರ್ಥೋದ್ಭವ: ನಾಡಿಗೆ ಸಮೃದ್ಧಿ, ಶಾಂತಿ ಮತ್ತು ಸುಖವನ್ನು ತರಲಿ :ಸಚಿವ ಎನ್. ಎಸ್. ಬೋಸರಾಜು
ಎನ್.ಎಸ್ ಬೋಸರಾಜು

ಬೆಂಗಳೂರು: ನಾಡಿನ ಜೀವ ನದಿ ತಾಯಿ ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ನಡೆಯುವ ಪವಿತ್ರ ಕಾವೇರಿ ತೀರ್ಥೋದ್ಭವದ ಶುಭ ಸಂದರ್ಭದಲ್ಲಿ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್. ಬೋಸರಾಜು ಅವರು ನಾಡಿನ ಸಮಸ್ತ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, "ಪ್ರತಿ ವರ್ಷ ತುಲಾ ಸಂಕ್ರಮಣದಂದು ತಲಕಾವೇರಿಯಲ್ಲಿ ಉದ್ಭವಿಸುವ ಪವಿತ್ರ ತೀರ್ಥವು ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಪವಿತ್ರ ಪ್ರತೀಕವಾಗಿದೆ. ತಾಯಿ ಕಾವೇರಿಯು ಕೋಟ್ಯಂತರ ಜನರ ಜೀವನಾಡಿಯಾಗಿದ್ದು, ಕರ್ನಾಟಕ ಸೇರಿದಂತೆ ನೆರೆ ಹೊರೆಯ ರಾಜ್ಯಗಳ ಅನ್ನದಾತಳಿಗೆ ಜಲ ಸಂಪತ್ತನ್ನು ಕರುಣಿಸಿದ್ದಾಳೆ" ಎಂದು ತಿಳಿಸಿದ್ದಾರೆ. "ಈ ಪುಣ್ಯ ಕಾಲದಲ್ಲಿ, ತಾಯಿ ಕಾವೇರಿಯು ರಾಜ್ಯಕ್ಕೆ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಮಳೆ-ಬೆಳೆಯನ್ನು ದಯಪಾಲಿಸಿ, ಜಲಸಮಸ್ಯೆಗಳು ನಿವಾರಣೆಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ."

"ಕೊಡಗು ಜಿಲ್ಲೆಯು ಪ್ರಕೃತಿಯ ವರವಾಗಿದ್ದು, ಈ ಪವಿತ್ರ ಕಾರ್ಯಕ್ರಮಕ್ಕೆ ಜಿಲ್ಲೆಗೆ ಆಗಮಿಸುವ ಎಲ್ಲಾ ಭಕ್ತರಿಗೆ ಆತ್ಮೀಯ ಸ್ವಾಗತವಿದೆ. ಜಿಲ್ಲಾಡಳಿತವು ಭಕ್ತರ ಅನುಕೂಲಕ್ಕೆ ಮತ್ತು ಸುರಕ್ಷತೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ." "ತೀರ್ಥೋದ್ಭವದ ಸಂದರ್ಭದಲ್ಲಿ ಭಕ್ತಾದಿಗಳು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿ, ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ." ತಾಯಿ ಕಾವೇರಿಯ ಆಶೀರ್ವಾದ ರಾಜ್ಯದ ಜನತೆಯ ಮೇಲೆ ಸದಾ ಇರಲಿ ಎಂದು ಸಚಿವರು ಹಾರೈಸಿದ್ದಾರೆ.