ಕೊಡಗು ಗೌಡ ಸಮಾಜದ ಪ್ರಮುಖರಿಂದ ಕಂದಾಯ ಸಚಿವರ ಭೇಟಿ
ಮಡಿಕೇರಿ: ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದರವರ ನೇತೃತ್ವದಲ್ಲಿ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರನ್ನು ಭೇಟಿ ಮಾಡಿ, ಸಮಾಜಕ್ಕೆ ಭೂಮಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭ ಶಾಸಕರಾದ ಎ.ಎಸ್ ಪೊನ್ನಣ್ಣ, ಡಾ. ಮಂತರ್ ಗೌಡ, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯಾನ ಜಯಾನಂದ,ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಮಂದ್ರೀರ ಮೋಹನ್ ದಾಸ್,ಕೊಲ್ಯದ ಗಿರೀಶ್, ಕುಯ್ಯಮುಡಿ ವಸಂತ ದಂಬೆಕೋಡಿ ಆನಂದ, ಹುದೇರಿ ರಾಜೇಂದ್ರ, ಪೊನ್ನಚ್ಚನ ಮಧು, ಅಮೆ ಸೀತಾರಾಮ ಹಾಗೂ ಇನ್ನಿತರ ಪ್ರಮುಖರು ಇದ್ದರು.