ಕೊಡಗು ಅನಿಯಂತ್ರಿತ ನಗರೀಕರಣದಿಂದ ಅವನತಿಯೆಡೆಗೆ ಸಾಗುತ್ತಿದ್ದು, ಜಿಲ್ಲೆಯ ನೆಲ-ಜಲ ಉಳಿವಿಗೆ ಸರ್ಕಾರ ತುರ್ತು ಕ್ರಮವಹಿಸಬೇಕು: ನಿ.ಕರ್ನಲ್ ಸಿ.ಪಿ.ಮುತ್ತಣ್ಣ ಆಗ್ರಹ
admincoorgdaily

ಮಡಿಕೇರಿ: ಕೊಡಗು ಅನಿಯಂತ್ರಿತ ನಗರೀಕರಣದಿಂದ ಅವನತಿಯೆಡೆಗೆ ಸಾಗುತ್ತಿದ್ದು, ಜಿಲ್ಲೆಯ ನೆಲ-ಜಲ ಉಳಿವಿಗೆ ಸರ್ಕಾರ ತುರ್ತು ಕ್ರಮವಹಿಸಬೇಕು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಟಾನದ ಪ್ರಮುಖರು ಮತ್ತು ನಿ.ಕರ್ನಲ್ ಸಿ.ಪಿ.ಮುತ್ತಣ್ಣ ಆಗ್ರಹಿಸಿದರು.
ಅನಿಯಂತ್ರಿತ ನಗರೀಕರಣ, ಹೊರಗಿನವರ ಭೂಖರೀದಿಗೆ ನಿರ್ಬಂಧ ಹೇರಬೇಕು. ಭೂಮಾರಾಟ ಸ್ಥಳೀಯರಿಗೆ ಸೀಮಿತಗೊಳಿಸಬೇಕು. ಕೆ.ನಿಡುಗಣೆಯ ೯೪ ಎಕರೆ ವಸತಿ ಯೋಜನೆ, ಕುಶಾಲನಗರ-ಮೈಸೂರು ರೈಲ್ವೆ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಪೊನ್ನಂಪೇಟೆ, ಗೋಣಿಕೊಪ್ಪ ಪ.ಪಂ. ರಚನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಆನೆ-ಮಾನವ ಸಂಘರ್ಷ, ಅಕ್ರಮ ಹೋಂಸ್ಟೇ, ತೋಡು ಒತ್ತುವರಿ, ಮಕ್ಕಳಗುಡಿ ಬೆಟ್ಟದಲ್ಲಿ ರೆಸಾರ್ಟ್ ಅಕ್ರಮದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಅವರು, ಬುಡಕಟ್ಟು ಜನರ ಆರೋಗ್ಯ, ರಕ್ಷಣೆಗೆ ಒತ್ತಾಯಿಸಿದರು.
ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕೊಡಗಿನಲ್ಲಿ ಅಕ್ರಮ ಭೂಪರಿವರ್ತನೆ, ತೋಡು ಒತ್ತುವರಿ, ನಿಯಮಬಾಹಿರ ಹೋಂಸ್ಟೇಗಳು ಹೆಚ್ಚಾಗಿವೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರೀನಿವಾಸ್, ಶಿವಶಂಕರ್, ಸುಬ್ಬ, ಪದ್ಮಿನಿ, ರೋಶನ್ ಇದ್ದರು.