ಕೊಡವ ಲೆದರ್ ಬಾಲ್ ಕ್ರಿಕೆಟ್; ಅಂಜಿಗೇರಿ ನಾಡ್ ಫೈನಲ್ ಗೆ ಲಗ್ಗೆ

Apr 24, 2026 - 22:24
 0  109
ಕೊಡವ ಲೆದರ್ ಬಾಲ್ ಕ್ರಿಕೆಟ್; ಅಂಜಿಗೇರಿ ನಾಡ್ ಫೈನಲ್ ಗೆ ಲಗ್ಗೆ

ಪೊನ್ನಂಪೇಟೆ.24: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 3 ನೇ ವರ್ಷದ ಟಿ 20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಕ್ವಾಲಿಫಯರ್ 1 ಪಂದ್ಯದಲ್ಲಿ ಟೀಮ್ ಕೊಡವ ಟ್ರೈಬ್ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಂಜಿಗೇರಿ ನಾಡ್ ಫೈನಲ್ ಗೆ ಲಗ್ಗೆಯಿಟ್ಟರೆ, ಎಲಿಮಿನೇಟರ್ ಪಂದ್ಯದಲ್ಲಿ ಎಂ.ಟಿ.ಬಿ ರಾಯಲ್ಸ್ ತಂಡದ ವಿರುದ್ಧ ಪರಾಭವಗೊಂಡ ಕೂರ್ಗ್ ಟೈಟಾನ್ ತಂಡ ಪಂದ್ಯಾವಳಿಯಲ್ಲಿ ತನ್ನ ಹೋರಾಟ ಮುಗಿಸಿ ನಿರ್ಗಮಿಸಿತು.

ಕ್ವಾಲಿಫಯರ್ 1 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಕೊಡವ ಟ್ರೈಬ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿ, ಅಂಜಿಗೇರಿ ನಾಡ್ ಗೆ 153 ರನ್ ಗಳ ಗುರಿ ನೀಡಿತು.

ಅಂಕುಶ್ ಬೋಪಣ್ಣ 43 ಎಸೆತಗಳಲ್ಲಿ 53, ಗೌರವ್ ಅಪ್ಪಣ್ಣ 25 ಎಸೆತಗಳಲ್ಲಿ 31, ಪೊನ್ನಪ್ಪ 31 ಎಸೆತಗಳಲ್ಲಿ 28 ರನ್ ಗಳ ಕಾಣಿಕೆ ನೀಡಿದರು. ಅಂಜಿಗೇರಿ ನಾಡ್ ಪರ ಗಗನ್ ಗಣಪತಿ, ಮಂಜು. ಕೆ. ಬಿ ತಲಾ 2 ವಿಕೆಟ್, ಸುಮುಖ್ 1 ವಿಕೆಟ್ ಪಡೆದರು. ಗೆಲ್ಲಲು 153 ರನ್ ಗಳ ಗುರಿ ಬೆನ್ನಟ್ಟಿದ ಅಂಜಿಗೇರಿ ನಾಡ್ 16 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿ, ಫೈನಲ್ ಗೆ ಪ್ರವೇಶಪಡೆದುಕೊಂಡಿತು. ಶಮಿತ್ ಸೋಮಣ್ಣ 37 ಎಸೆತಗಳಲ್ಲಿ ಭರ್ಜರಿ 64 ರನ್ ಸಿಡಿಸಿದರು, ಮಂಜು ಕೆ. ಬಿ. 30 ಎಸೆತಗಳಲ್ಲಿ 39, ಅಕರ್ಷ್ ಪೂವಯ್ಯ 13 ಎಸೆತಗಳಲ್ಲಿ 24, ಸುಮುಖ್ 16 ಎಸೆತಗಳಲ್ಲಿ 14 ರನ್ ಗಳ ಕಾಣಿಕೆ ನೀಡಿದರು.

ಟೀಮ್ ಕೊಡವ ಟ್ರೈಬ್ ಪರ ಗೌರವ್ ಅಪ್ಪಣ್ಣ ಮತ್ತು ದೇವಯ್ಯ ತಲಾ 1 ವಿಕೆಟ್ ಪಡೆದರು. ಅಂಜಿಗೇರಿ ನಾಡ್ ನ ಮಂಜು ಕೆ. ಬಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಕೂರ್ಗ್ ಟೈಟಾನ್ ಮತ್ತು ಎಂ.ಟಿ.ಬಿ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಟೈಟಾನ್ 16.2 ಓವರಗಳಲ್ಲಿ 71 ರನ್ ಗಳ ಅಲ್ಪ ಮೊತ್ತಕ್ಕೆ ಸರ್ವಪತನಗೊಂಡು, ಎಂ.ಟಿ.ಬಿ ರಾಯಲ್ಸ್ ಗೆ 72 ರನ್ ಗಳ ಸುಲಭ ಗುರಿ ನೀಡಿತು. ಡೆಲ್ವಿನ್ 10 ಎಸೆತಗಳಲ್ಲಿ 14, ಅಚ್ಚಪ್ಪ 18 ಎಸೆತಗಳಲ್ಲಿ 10 ರನ್ ಗಳಿಸಿದರು. ಎಂ.ಟಿ.ಬಿ. ರಾಯಲ್ಸ್ ಪರ ಅಯ್ಯಪ್ಪ ಮತ್ತು ನೆಲ್ 3 ವಿಕೆಟ್ ಪಡೆದು ಮಿಂಚಿದರು. ಸುಕ್ಕಿ 2, ಪ್ರತೀಕ್ ತಿಮ್ಮಯ್ಯ, ಶಿಪ್ರೆಜ್ ಸೋಮಣ್ಣ ತಲಾ 1 ವಿಕೆಟ್ ಪಡೆದರು. ಗೆಲ್ಲಲು 72 ರನ್ ಗಳ ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ 10.3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸುವ ಮೂಲಕ ಕ್ವಾಲಿಫಯರ್ 2 ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿತು.

ವೈಶಾಖ್ ತಿಮ್ಮಯ್ಯ 24 ಎಸೆತಗಳಲ್ಲಿ 26, ಸುಕ್ಕಿ 22 ಎಸೆತಗಳಲ್ಲಿ 21, ಮಿಥುನ್ ಮುತ್ತಣ್ಣ 18 ಎಸೆತಗಲ್ಲಿ 21 ರನ್ ಗಳ ಕಾಣಿಕೆ ನೀಡಿದರು. ಕೂರ್ಗ್ ಟೈಟಾನ್ಸ್ ಪರ ಪ್ರತೀಕ್ ನಂಜಪ್ಪ ಏಕೈಕ ವಿಕೆಟ್ ಪಡೆದರು. ಎಂ. ಟಿ. ಬಿ ರಾಯಲ್ಸ್ ನ ನೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. 

ನಾಳಿನ  ಪಂದ್ಯ. ಬೆಳಗ್ಗೆ 10 ಕ್ಕೆ: ಕ್ವಾಲಿಫಯರ್ 2, ಟೀಮ್ ಕೊಡವ ಟ್ರೈಬ್ V/S ಎಂ.ಟಿ. ಬಿ ರಾಯಲ್ಸ್.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0