ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್; ಕೂರ್ಗ್ ಟೈಟಾನ್ಸ್, ಅಂಜಿಗೇರಿ ನಾಡ್ ಗೆ ಜಯ

Apr 14, 2026 - 22:59
 0  111
ಕೊಡವ ಲೆದರ್ ಬಾಲ್ ಕ್ರಿಕೆಟ್   ಲೀಗ್; ಕೂರ್ಗ್ ಟೈಟಾನ್ಸ್,  ಅಂಜಿಗೇರಿ ನಾಡ್ ಗೆ ಜಯ

ಗೋಣಿಕೊಪ್ಪಲು : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 3 ನೇ ವರ್ಷದ ಟಿ 20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ 5 ನೇ ದಿನದಾಟದಲ್ಲಿ ಕೂರ್ಗ್ ಟೈಟಾನ್ಸ್ ಮತ್ತು ಅಂಜಿಗೇರಿ ನಾಡ್ ತಂಡ ಗೆಲುವು ಸಾಧಿಸಿದವು.

ತಾ.14 ರ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಲೆವರೇಜ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 144 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿ, ಕೂರ್ಗ್ ಟೈಟಾನ್ಸ್ ತಂಡಕ್ಕೆ 145 ರನ್ ಗಳ ಗುರಿ ನೀಡಿತು. ಸಂಕೇತ್ 40 ಎಸೆತಗಳಲ್ಲಿ 56 ರನ್ ಗಳಿಸಿದರು.

ಕೂರ್ಗ್ ಟೈಟಾನ್ಸ್ ಪರ ಪ್ರತೀಕ್ ನಾಚಪ್ಪ 3 ವಿಕೆಟ್ ಪಡೆದರು. 145 ರನ್ ಗಳ ಗುರಿ ಬೆನ್ನಟ್ಟಿದ ಕೂರ್ಗ್ ಟೈಟಾನ್ಸ್ 19.1 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು, 1 ವಿಕೆಟ್ ಗೆಲುವು ಸಾಧಿಸಿತು. ಕುಟ್ಟಪ್ಪ 23 ಎಸೆತಗಳಲ್ಲಿ 33 ರನ್ ಗಳಿಸಿದರು. ಟೀಮ್ ಲೆವರೇಜ್ ಪರ ಸಾಶ್ವಿತ್ ಸೋಮಣ್ಣ 3 ವಿಕೆಟ್ ಪಡೆದರು.

ಕೂರ್ಗ್ ಟೈಟಾನ್ಸ್ ನ ಪ್ರತೀಕ್ ನಂಜಪ್ಪ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಶಸ್ತಿ ಪಡೆದುಕೊಂಡರು. ಅಂಜಿಗೇರಿ ನಾಡ್ ಮತ್ತು ಕೊಡವ ರೈಸಿಂಗ್ ಸ್ಟಾರ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಂಜಿಗೇರಿ ನಾಡ್, 18 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 199 ರನ್ ಗಳ ಉತ್ತಮ ಮೊತ್ತ ಕಲೆ ಹಾಕಿತು. ಸಮಿತ್ ಸೋಮಣ್ಣ 51 ಎಸೆತಗಳಲ್ಲಿ 76 ರನ್, ಮಂಜು ಕೆ. ಬಿ 34 ಎಸೆತಗಳಲ್ಲಿ 50 ರನ್ ಗಳಿಸಿದರು.

ಕೊಡವ ರೈಸಿಂಗ್ ಸ್ಟಾರ್ಸ್ ಪರ ಅರ್ಜುನ್ ಪೊನ್ನಣ್ಣ 2 ವಿಕೆಟ್ ಪಡೆದರು. ಗೆಲ್ಲಲು 200 ರನ್ ಗಳ ಗುರಿ ಬೆನ್ನಟ್ಟಿದ ಕೊಡವ ರೈಸಿಂಗ್ ಸ್ಟಾರ್ಸ್ ನಿಗದಿತ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿ 53 ರನ್ ಗಳಿಂದ ಸೋಲೊಪ್ಪಿಕೊಂಡಿತು. ಅಂಜಿಗೇರಿ ನಾಡ್ ಈ ಪಂದ್ಯಾವಳಿಯ ಸತತ 4 ನೇ ಗೆಲುವು ಪಡೆಯಿತು. ಅನ್ಸುಲ್ ಪೊನ್ನಣ್ಣ 28 ಎಸೆತಗಳಲ್ಲಿ 33 ರನ್ ಗಳಿಸಿದರು. ಅಂಜಿಗೇರಿ ನಾಡ್ ಪರ ಗಗನ್ ಗಣಪತಿ 2 ವಿಕೆಟ್ ಗಳಿಸಿದರು. ಅಂಜಿಗೇರಿ ನಾಡ್ ನ ಮಂಜು. ಕೆ. ಬಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ನಾಳಿನ ಪಂದ್ಯಗಳು: ಬೆಳಗ್ಗೆ 9.30 ಕ್ಕೆ ಟೀಮ್ ಕೊಡವ ಟ್ರೈಬ್ VS ಎಂ. ಟಿ. ಬಿ ರಾಯಲ್ಸ್ ಮಧ್ಯಾಹ್ನ 1.30 ಕೂರ್ಗ್ ಟೈಟಾನ್ಸ್ V/S ಕೊಡವ ರೈಸಿಂಗ್ ಸ್ಟಾರ್ಸ್

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0