ಕುಶಾಲನಗರ: ಬೀದಿ ನಾಯಿಗಳ ದಾಳಿಗೆ ಎರಡು ಕುರಿ ಬಲಿ
ಕುಶಾಲನಗರ: ಇಲ್ಲಿನ ಇಂದಿರಾ ಬಡಾವಣೆಯಲ್ಲಿ ಬೀದಿ ನಾಯಿಗಳ ದಾಳಿಗೆ ಎರಡು ಕುರಿಗಳು ಮೃತಪಟ್ಟಿವೆ. ಇಂದಿರಾ ಬಡಾವಣೆಯ ಖಲೀಲ್ ಎಂಬುವರಿಗೆ ಸೇರಿದ ಕುರಿಗಳ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿವೆ.
ಮೃತ ಕುರಿಗಳ ಮೌಲ್ಯ ಸುಮಾರು ₹20 ಸಾವಿರ ಎಂದು ಅಂದಾಜಿಸಲಾಗಿದೆ. "ಸಾಕಿದ ಕುರಿಗಳನ್ನು ನಾಯಿಗಳು ಕೊಂದುಹಾಕಿವೆ. ತುಂಬಾ ನಷ್ಟವಾಗಿದೆ" ಎಂದು ಕುರಿ ಮಾಲೀಕ ಖಲೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಅಂಬೇಡ್ಕರ್ ಜನಪರ ವೇದಿಕೆಯ ಅಧ್ಯಕ, ಆದಂ,"ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಮಕ್ಕಳು ಹೊರಗೆ ಆಟವಾಡಲು, ಶಾಲೆಗೆ ಹೋಗಲು ಭಯಪಡುವಂತಾಗಿದೆ. ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
