ಕುಶಾಲನಗರ:ರಸ್ತೆ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿದ ಶಾಸಕ ಡಾಕ್ಟರ್ ‌ಮಂತರ್ ಗೌಡ

May 8, 2026 - 22:03
 0  1.2k
ಕುಶಾಲನಗರ:ರಸ್ತೆ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿದ ಶಾಸಕ ಡಾಕ್ಟರ್ ‌ಮಂತರ್ ಗೌಡ

ಕುಶಾಲನಗರ;ನಿಯಂತ್ರಣ ತಪ್ಪಿ ರಸ್ತೆಗುರುಳಿದ ಬೈಕ್ ಸವಾರನಿಗೆ ಅದೇ ಸ್ಥಳದಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಪ್ರಥಮ‌ ಚಿಕಿತ್ಸೆ ನೀಡಿದ್ದಾರೆ.

ಕೂಡಿಗೆ ಬಳಿಯ ಕಣಿವೆಯಲ್ಲಿ ಸಾಗುತ್ತಿದ್ದ ಬೈಕ್ ಒಂದು ನಿಯಂತ್ರಣ ತಪ್ಪಿ ರಸ್ತೆಗುರುಳಿತ್ತು, ಕಣಿವೆ ನೂತನ ಬಸ್ ಸ್ಟಾಪ್ ಕಾಮಗಾರಿಯ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯಲ್ಲಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಮಾಹಿತಿ ತಿಳಿದ ಕೂಡಲೆ ಅಲ್ಲಿಗೆ ತೆರಳಿ ತಮ್ಮ ವಾಹನದಲ್ಲಿದ್ದ ಫಸ್ಟ್ ಏಯ್ಡ್ ಕಿಟ್ ಬಳಸಿ ಗಾಯಗೊಂಡಿದ್ದ ಬೈಕ್ ಸವಾರನ ಪ್ರಥಮ‌ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ರವಾನಿಸುವಲ್ಲಿ ತುರ್ತಾಗಿ ಸ್ಪಂದಿಸಿದ್ದು ಸ್ಥಳೀಯ ಗ್ರಾಮಸ್ಥರು, ಸಾರ್ವಜನಿಕರು ದಾರಿಹೋಕರು ಶಾಸಕರ ಕಾಳಜಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

What's Your Reaction?

Like Like 4
Dislike Dislike 0
Love Love 2
Funny Funny 1
Angry Angry 0
Sad Sad 1
Wow Wow 0