ಕುಶಾಲನಗರ; ಬೈಚನಹಳ್ಳಿಯಲ್ಲಿ‌ ನೂತನ ನಾಟ್ಯನಿಕೇತನ,ನೃತ್ಯ ಶಾಲೆ ಶುಭಾರಂಭ

Apr 21, 2026 - 20:50
Apr 21, 2026 - 20:51
 0  327
ಕುಶಾಲನಗರ; ಬೈಚನಹಳ್ಳಿಯಲ್ಲಿ‌ ನೂತನ ನಾಟ್ಯನಿಕೇತನ,ನೃತ್ಯ ಶಾಲೆ ಶುಭಾರಂಭ

ಕುಶಾಲನಗರ; ನಾಟ್ಯನಿಕೇತನ ಸಂಗೀತ, ನೃತ್ಯ ಶಾಲೆಯು ಬೈಚನಹಳ್ಳಿ, ಕುಶಾಲನಗರದಲ್ಲಿ ನೂತನ ತರಗತಿಯ ಶುಭಾರಂಭವು ದಿನಾಂಕ 19-04-2026ನೇ ಭಾನುವಾರದಂದು, ಗೆಜ್ಜೆ ಪೂಜೆ, ಸರಸ್ವತಿ ಪೂಜೆ ಕಾರ್ಯಕ್ರಮ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಬಹಳ ಅದ್ದೂರಿಯಿಂದ ನಡೆಯಿತು.

 ಈ ಕಾರ್ಯಕ್ರಮಕ್ಕೆ ನೃತ್ಯ ಕಲಾವಿದರುಗಳಾದ ಶ್ರೀಮತಿ ಶಾರದಾಉದಯ್, ಶ್ರೀಯುತ ವಿದ್ವಾನ್. ಬಿ. ಸಿ. ಶಂಕರಯ್ಯ ರವರು ಹಾಗೆ ಶ್ರೀಯುತ ವಿದ್ವಾನ್ ದಯಾನಂದ್ ರವರು ಮುಖ್ಯ ಅತಿಥಿಗಳಾಗಿ ಬಂದು ಉದ್ಘಾಟನಾ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯ ಪೋಷಕರು, ಗುರುಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳು, ಗುರುಗಳು, ಪೋಷಕರು ಹಾಗೂ ಗುರುಹಿರಿಯರ ಸಮ್ಮುಖದಲ್ಲಿ ಮಕ್ಕಳು ಗೆಜ್ಜೆಯನ್ನು ಕಟ್ಟಿ ನೃತ್ಯ ಪ್ರದರ್ಶನ ನೀಡಿದರು.ನಿರೂಪಣೆ ಯನ್ನು ಗೀತಾಗುರುಪ್ರಸಾದ್ ರವರು ನಡೆಸಿಕೊಟ್ಟರು. ಹಾಗೆಯೇ ಕರ್ನಾಟಕ ಡಾ. ಗಂಗೂಭಾಯಿ ಹಾನಗಲ್ ಸಂಗೀತಾ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ನಡೆಸುವ ಭರತನಾಟ್ಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಮಾಡಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0