ಕುಶಾಲನಗರ : ಜಿಲ್ಲೆಗೆ ದ್ವಿತೀಯ ಟಾಪರ್ ವಿದ್ಯಾರ್ಥಿನಿ ರಿಲಾಸಾರಮ್ಮಗೆ ಸನ್ಮಾನ

Apr 30, 2026 - 17:19
 0  757
ಕುಶಾಲನಗರ : ಜಿಲ್ಲೆಗೆ ದ್ವಿತೀಯ ಟಾಪರ್ ವಿದ್ಯಾರ್ಥಿನಿ ರಿಲಾಸಾರಮ್ಮಗೆ ಸನ್ಮಾನ

ಕುಶಾಲನಗರ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಿಲಾಸಾರಮ್ಮ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಟಾಪರ್ ಆಗಿ ತೇರ್ಗಡೆ ಹೊಂದಿದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

 ಇಲ್ಲಿನ ನಿಂಗೇಗೌಡ ಬಡಾವಣೆಯ ನಿವಾಸಿ ರಜಾಕ್ ಮತ್ತು ರಮ್ಲಾತ್ ಅವರ ಪುತ್ರಿಯಾದ ಈಕೆ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 590 ಅಂಕಗಳನ್ನು ಪಡೆದಿದ್ದಾರೆ. ಸಮಿತಿ ಸದಸ್ಯರು ರಿಲಾಸಾರಮ್ಮಗೆ ಸನ್ಮಾನದೊಂದಿಗೆ ಪ್ರೋತ್ಸಾಹ ಧನ ನೀಡಿ ಮುಂದಿನ ಶೈಕ್ಷಣಿಕ ಪ್ರಗತಿಗೆ ಶುಭ ಹಾರೈಸಿದರು. ಈ ಸಂದರ್ಭ ಶಿಕ್ಷಕ ಸುಲೇಮಾನ್ , ಸಿ.ಎಂ ಅಝೀಜ್, ಹಮೀದ್ ಬಜ್ಪೆ ಸೈಫ್, ಶಿವಪ್ರಸಾದ್, ರಫೀಕ್ ಹಾಗೂ ಎಂ.ಎಂ. ದಾವೂದ್ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 1
Wow Wow 0