ಗೊಂದಲಗಳಿಗೆ ಎಡೆಮಾಡಿಕೊಡದೆ ದಸರಾ ಜನೋತ್ಸವ ಯಶಸ್ವಿಯಾಗಿ ನಡೆಯಲಿ: ಗ್ರಾ.ಪಂ.ಸದಸ್ಯ ರಾಮಕೃಷ್ಣ ಸ್ಪಷ್ಟನೆ
ಗೋಣಿಕೊಪ್ಪಲು: ಹಿರಿಯರು ಕಟ್ಟಿ ಬೆಳೆಸಿದ ಶ್ರೀ ಕಾವೇರಿ ದಸರಾ ಸಮಿತಿಯು ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ, ದೇವಿ ಚಾಮುಂಡೇಶ್ವರಿಯ ಕಾರ್ಯಕ್ರಮ ಸಾಂಗವಾಗಿ ನೆರವೇರಲಿ ಎಂದು ಗೋಣಿಕೊಪ್ಪಲು ಗ್ರಾಮ ಪಂಚಾಯ್ತಿ ಸದಸ್ಯರಾದ ರಾಮಕೃಷ್ಣ ಅವರು ತಿಳಿಸಿದ್ದಾರೆ. ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ಆಯೋಜಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಪೈಪೋಟಿ, ಒತ್ತಡ ,ಗೊಂದಲಗಳಲ್ಲಿ ದಸರಾ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುವುದು ಮಾನಸಿಕ ಯಾತನೆಯಾಗುತ್ತದೆ ಎಂಬ ನಿಲುವಿನಿಂದ ಅಧ್ಯಕ್ಷ ಸ್ಥಾನದಿಂದ ಹೊರಗುಳಿಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಕೊಣಿಯಂಡ ಬೋಜಮ್ಮ ಉತ್ತಪ್ಪ ಅವರು ಮಾಶನಾಡಿ, ದಸರಾ ನಡೆಸಿದ ಹಿರಿಯರಿಗೆ ನೋವಾಗಬಾರದು, ಹಿಂದೂ ಧಾರ್ಮಿಕ ಪದ್ದತಿಗಳಿಗೆ ಅಪಚಾರವಾಗಬಾರದು. ಎಂದರಲ್ಲದೇ, ದಸರಾ ಜನೋತ್ಸವ ಚೆನ್ನಾಗಿ ಉತ್ತಮವಾಗಿ ನಡೆಯಲಿ ಎಂದು ಆಶಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಬಿ. ಎನ್ ಪ್ರಕಾಶ್, ರತಿ ಆಚ್ಚಪ್ಪ, ರಾಜೇಶ್ ಕೆ, ಸೌಮ್ಯ ಬಾಲು, ಚೈತ್ರ ಚೇತನ್ ವಿವೇಕ್ ಉಪಸ್ಥಿತರಿದ್ದರು.
ವರದಿ:, ಚಂಪಾ ಗಗನ,, ಪೊನ್ನಂಪೇಟೆ