Kodagu

ಅಚ್ಚರಿ ವ್ಯಕ್ತಪಡಿಸಿದ ಶಾಸಕ ಎ.ಎಸ್.ಪೊನ್ನಣ್ಣ: ಕೊಡಗಿನಲ್ಲಿ ಜನಪದ ಕಾರ್ಯಕ್ರಮಕ್ಕೆ ಮೈಸೂರಿನಿಂದ ಕಲಾ ತಂಡ

admincoorgdaily

ಮಡಿಕೇರಿ:ಮಡಿಕೇರಿಯಲ್ಲಿ ನಡೆಯುತ್ತಿರುವ ಜನಪದ ದಸರಾ ಕಾರ್ಯಕ್ರಮಕ್ಕೆ ಕೊಡವ ಅಕಾಡಮಿ ಕೊಡವ ಜನಪದ ತಂಡವನ್ನು ಮೈಸೂರಿನಿಂದ ಕರೆಸಿರುವುದನ್ನು ಗಮನಿಸಿ ಕಾರ್ಯಕ್ರಮ ಉಧ್ಘಾಟಿಸಿದ ಎ.ಎಸ್.ಪೊನ್ನಣ್ಣ ನವರು ಅಚ್ಚರಿ ವ್ಯಕ್ತಪಡಿಸಿದರು.

ತಾವು ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೊಡಗಿನಿಂದ ತಂಡವನ್ನು ಕರೆಸಿಕೊಂಡಿದನ್ನು ಸ್ಮರಿಸಿದ ಅವರು ಕೊಡಗಿನ ಸಂಸ್ಕೃತಿ ಕಲೆ ಇಲ್ಲೇ ಹುಟ್ಟಿರುವಾಗ ಇಲ್ಲಿನವರಿಗೆ ಅವಕಾಶ ನೀಡದಿರುವ ಬಗ್ಗೆ ಸೂಕ್ಷವಾಗಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.