ದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆಯಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

May 25, 2026 - 16:46
 0  230
ದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆಯಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ಸೋಮವಾರಪೇಟೆ: ದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆಯು ಇಂದು ಸೋಮವಾರಪೇಟೆಯಲ್ಲಿ ನಡೆಯಿತು.

 ಸೋಮವಾರಪೇಟೆಯ ಖಾಸಗಿ ಸಭಾಂಗಣದಲ್ಲಿ, ಸಂಘದ ಅಧ್ಯಕ್ಷರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.

ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘ ನಿ., ಸಂಘವು ಪುನಃಶ್ಚತನಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಫಿ ಮತ್ತು ಇತರೆ ಪ್ಲಾಂಟೇಷನ್ ಬೆಳೆ ಉತ್ಪನ್ನಗಳ ಮೌಲ್ಯವೃದ್ದೀಕರಣದಲ್ಲಿ ಸಂಘದ ಪಾತ್ರ ಮತ್ತು ಚಟುವಟಿಕೆಗಳನ್ನು ನಿರ್ಧರಿಸುವ ಬಗ್ಗೆ ವಿಚಾರ ಸಂಕೀರ್ಣ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡು, ಇಂದಿನ ದಿನಗಳಲ್ಲಿ ಸಂಘವು ಮತ್ತಷ್ಟು ಲಾಭ ಹಾಗೂ ಯಶಸ್ಸಿನೊಂದಿಗೆ ಮುಂದುವರೆಯಲು ಕಾರ್ಯತಂತ್ರ ಹಾಗೂ ಯೋಜನೆಗಳನ್ನು ರೂಪಿಸುವ ಕುರಿತು ಚರ್ಚಿಸಲಾಯಿತು. 

 ಇಂದಿನ ಸಭೆಯಲ್ಲಿ, ಉಪಾಧ್ಯಕ್ಷರು ಪ್ರಭುದೇವ, ಸದಸ್ಯರು, ನಿರ್ದೇಶಕರು, ವಿಚಾರ ಸಂಕೀರ್ಣದ ವೇದಿಕೆ ಅಧ್ಯಕ್ಷರು ಶ್ರೀ ಎನ್. ಬೋಸ್ ಮಂದಣ್ಣ, ಪ್ರಮುಖರು ಚಂದ್ರಕಲಾ, ಯಾಕೂಬ್, ಕಾಫಿ ಬೆಳೆಗಾರರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0