ವಿದ್ಯುತ್ ಅವಘಡದಿಂದ ಮೃತಪಟ್ಟ ಹಸು: ಪರಿಹಾರ ವಿತರಿಸಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಕೋಟುಪರಂಬು ಪಂಚಾಯಿತಿಯ ಕುಂಜಲಗೇರಿ ಗ್ರಾಮದ ಚಿಯಂಡೀರ ಸುರೇಶ್ ಹಾಗೂ ಸುಬ್ರಮಣಿ ಎಂಬ ರೈತರ ಹಸುಗಳು, ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು, ಇದನ್ನು ಮನಗಂಡ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಪರಿಹಾರ ವಿತರಿಸಿದರು. ಹಸು ಸಾಕಾಣೆಯಿಂದ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದ ರೈತರ ಹಸುಗಳು ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟಿದೆ. ವಿಷಯ ತಿಳಿದೊಡನೆ ಸರ್ಕಾರ ಮಟ್ಟದಲ್ಲಿ ಮಾತನಾಡಿದ ಮಾನ್ಯ ಶಾಸಕರು ರೈತ ಕುಟುಂಬಕ್ಕೆ ₹ 1.62ಲಕ್ಷ ಪರಿಹಾರ ಒದಗಿಸುವಲ್ಲಿ ಸಫಲರಾಗಿದ್ದರು. ಇಂದು ವಿರಾಜಪೇಟೆಯ ತಮ್ಮ ಗೃಹ ಕಚೇರಿಯಲ್ಲಿ ಸದ್ರಿ ರೈತನಿಗೆ ಪರಿಹಾರದ ಚೆಕ್ ವಿತರಿಸಿದರು.
. ಈ ಸಂದರ್ಭದಲ್ಲಿ ಪ್ರಮುಖರಾದ ಬಟ್ಟಕಾಳಂಡ ರಾಜ, ಮುಂಡಂಡ ಅನಿಲ್ ಬಿದ್ದಪ್ಪ, ಬಂಟ್ರ ದಯಾ ರೈ, ಬೋವೇರಿಯಂಡ ಅಜಿತ್, ಚೆಸ್ಕಾಂ ಅಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.