Kodagu

ಕ್ರೀಡೆಯನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ :ಕ್ರೀಡಾಪಟುಗಳಿಗೆ ಶಾಸಕ ಎ‌ಎಸ್ ಪೊನ್ನಣ್ಣ ಕಿವಿ ಮಾತು

admincoorgdaily

ಮಡಿಕೇರಿ; ಸಾಯಿ ಟರ್ಫ್ ಮೈದಾನದಲ್ಲಿ, ಪನ್ನಂಗಳ ಪ್ಯಾಂಥರ್ಸ್ ವತಿಯಿಂದ ಆಯೋಜನೆಗೊಂಡ ಹಾಕಿ ಪಂದ್ಯಾವಳಿಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ವಿಶೇಷ ಆಹ್ವಾನದ ಮೇರೆಗೆ ಪಂದ್ಯಾವಳಿಯ ವೀಕ್ಷಣೆಗೆ ತೆರಳಿದ ಶಾಸಕರು, ಬಳಿಕ ಮಾತನಾಡುತ್ತಾ ಪ್ರತಿಯೊಬ್ಬನ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ಹೇಳಿದರು. ಹಾಕಿ ಕ್ರೀಡೆಗೆ ಪ್ರಸಿದ್ಧವಾದ ಕೊಡಗಿನಲ್ಲಿ ಇಂತಹ ಪಂದ್ಯಾವಳಿಗಳು ಯುವ ಪ್ರತಿಭೆಗಳನ್ನು ಮುನ್ನಡೆಗೆ ತರಲು ಸಹಕಾರಿಯಾಗಲಿದೆ ಎಂದು ಹೇಳಿದ ಶಾಸಕರು, ಕ್ರೀಡೆಯನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ ಅದರಿಂದ ಲಭಿಸುವ ಜೀವನದ ಪಾಠವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕೆಂದು ಕರೆ ನೀಡಿದರು

. ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಕೆ ಡಿ ಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಪ್ರಮುಖರಾದ ಕಲಿಯಂಡ ಸಂಪನ್ ಅಯ್ಯಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.