ಮಹಾದೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಉದ್ಘಾಟಿಸಿದ ಶಾಸಕ‌ ಎಎಸ್ ಪೊನ್ನಣ್ಣ

ಮಹಾದೇಶ್ವರ  ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಉದ್ಘಾಟಿಸಿದ ಶಾಸಕ‌ ಎಎಸ್ ಪೊನ್ನಣ್ಣ

ವಿರಾಜಪೇಟೆ:ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಶ್ರೀ ಮಹಾದೇಶ್ವರ ದೇವಸ್ಥಾನ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಬಳಿಕ ರೂ 5ಲಕ್ಷ ಅನುದಾನದಲ್ಲಿ ಪೂರ್ಣಗೊಂಡ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಇಂದು ಉದ್ಘಾಟನೆ ನೆರೆವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು ರಾಬಿನ್ ಚಿನ್ನಪ್ಪ, ವಲಯ ಅಧ್ಯಕ್ಷರು ಮಾಚ್ಚರಂಡ ಕಿರಣ್, ಮಚ್ಚರಂಡ ಮಣಿ ಕಾರ್ಯಪ್ಪ, ಪಂಚಾಯಿತಿ ಅಧ್ಯಕ್ಷರು ಗ್ರೀಷ್ಮ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.