ಪೆರುಂಬಾಡಿ ವಾಲ್ಮೀಕಿ ಭವನದಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೆರುಂಬಾಡಿ ವಾಲ್ಮೀಕಿ ಭವನದಲ್ಲಿ, ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಆಚರಿಸಲ್ಪಡುತ್ತಿರುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಪ್ರತಿ ವರ್ಷ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ಈ ಕಾರ್ಯಕ್ರಮದಲ್ಲಿ, ಇಂದು ಬೆಳಿಗ್ಗೆ ಶಾಸಕರು ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾನ ಮುಹೂರ್ತದಲ್ಲಿ ಭಾಗವಹಿಸಿ ಪ್ರಾರ್ಥಿಸಿದರು. ಪ್ರತಿಷ್ಠಾಪನೆಯ ಬಳಿಕ ಶ್ರೀದೇವರ ಪ್ರಸಾದವನ್ನು ಪಡೆದ ಶಾಸಕರು, ವಿಘ್ನ ನಿವಾರಕ ಶ್ರೀ ಗಣಪತಿಯು ನಾಡಿನ ಎಲ್ಲರಿಗೂ ಒಳಿತನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್, ಪಕ್ಷದ, ಕಾಂಗ್ರೆಸ್ ಮುಖಂಡರು ಜೋಕಿಮ್, ಶಶಿ ಕೆಡಿಪಿ ಸದಸ್ಯರು, ಪೊನ್ನಣ್ಣ ಸಿ ಕೆ, ಅರ್ಜಿ ಪಂಚಾಯಿತಿ ಸದಸ್ಯರು ಉಪೇಂದ್ರ, ಅನೂಪ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.