ಬಲಂಬೇರಿ ಅಗಸ್ತೇಶ್ವರ ದೇವಸ್ಥಾನಕ್ಕೆ ಶಾಸಕ ಎ‌ಎಸ್ ಪೊನ್ನಣ್ಣ ಭೇಟಿ: ವಿಶೇಷ‌ ಪೂಜೆ

ಬಲಂಬೇರಿ ಅಗಸ್ತೇಶ್ವರ ದೇವಸ್ಥಾನಕ್ಕೆ ಶಾಸಕ ಎ‌ಎಸ್ ಪೊನ್ನಣ್ಣ ಭೇಟಿ: ವಿಶೇಷ‌ ಪೂಜೆ

ವಿರಾಜಪೇಟೆ: ವಿಧಾನಸಭಾ ಕ್ಷೇತ್ರದ ಬಲಂಬೇರಿ ಪ್ರಸಿದ್ಧ ಅಗಸ್ತೇಶ್ವರ ದೇವಾಲಯಕ್ಕೆ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಐತಿಹಾಸಿಕ ಮಹತ್ವವುಳ್ಳ ಹಾಗೂ ಕಾವೇರಿ ತಾಯಿಗೆ ಸಂಬಂಧಿಸಿದ ಅತ್ಯಂತ ಪಾವಿತ್ರ್ಯತೆಯ ಈ ಕ್ಷೇತ್ರಕ್ಕೆ, ತುಲಾ ಸಂಕ್ರಮಣದ ಮರುದಿನ ಶಾಸಕರು ಆಗಮಿಸಿ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿದೊಡನೆ ಮಾನ್ಯ ಶಾಸಕರು ನೇರವಾಗಿ ಕಾವೇರಿ ನದಿಗೆ ತೆರಳಿ, ಪುಣ್ಯ ತೀರ್ಥ ಸೇವಿಸಿದ ಬಳಿಕ ನದo ಸ್ವರೂಪಿಣಿ ಕಾವೇರಿ ತಾಯಿಗೆ ಆರತಿ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಬ

ಳಿಕ ಅಗಸ್ಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಯೇ ಅನ್ನಪ್ರಸಾದವನ್ನು ಸ್ವೀಕರಿಸಿದರು. ಅಗಸ್ಟೇಶ್ವರ ಸನ್ನಿಧಿಗೆ ಆಗಮಿಸುವ ಸಂದರ್ಭ ಮಾನ್ಯ ಶಾಸಕರು ಮುನೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೋಳಚೇಟೀರ ಸುರೇಶ್, ಬೋಳಂಡ ಶೇರಿ, ಕೌಶಿಕ್, ತಕ ಮುಖ್ಯಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.