ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಕೇಂದ್ರದಿಂದ ಎರಡೂ ಜಿಲ್ಲೆಗೆ ಒಂದೇ ಒಂದು ಹೊಸ ಯೋಜನೆ ತಂದಿಲ್ಲ;ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

Apr 28, 2026 - 17:13
 0  140
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಕೇಂದ್ರದಿಂದ ಎರಡೂ ಜಿಲ್ಲೆಗೆ ಒಂದೇ ಒಂದು ಹೊಸ ಯೋಜನೆ ತಂದಿಲ್ಲ;ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಮಡಿಕೇರಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಕೇಂದ್ರದಿಂದ ಎರಡೂ ಜಿಲ್ಲೆಗೆ ಒಂದೇ ಒಂದು ಹೊಸ ಯೋಜನೆ ತಂದಿಲ್ಲ. ಸಂಸದರು ಎಲ್ಲಿದ್ದಾರೆ ಎಂದು ಜನ ಹುಡುಕಾಡುವ ಪರಿಸ್ಥಿತಿ ಬಂದಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 ಕರ್ನಾಟಕ ಕೇಂದ್ರಕ್ಕೆ ೫ ಲಕ್ಷ ಕೋಟಿ ರೂ. ತೆರಿಗೆ ನೀಡುತ್ತಿದ್ದರೆ, ವಾಪಸ್ ಬರುವುದು ಕೇವಲ ೬೦ ಸಾವಿರ ಕೋಟಿ. ಇಷ್ಟಿದ್ದರೂ ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಒಂದೂ ಯೋಜನೆ ತರಲಿಲ್ಲ. ಇನ್ನಾದರೂ ಎಚ್ಚೆತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ" ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಉತ್ತರ ಭಾರತದಲ್ಲಿ ಸ್ಥಾನ ಗಟ್ಟಿಗೊಳಿಸಲು ಲೋಕಸಭಾ ಕ್ಷೇತ್ರಗಳನ್ನು ಶೇ.೫೦ರಷ್ಟು ಹೆಚ್ಚಿಸಲು ಹೊರಟಿದೆ. ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣಕ್ಕೆ ಇದು ಅನ್ಯಾಯ. ಉತ್ತರದಲ್ಲಿ ಜನಸಂಖ್ಯೆ ಶೇ.೧೯೫ರಷ್ಟು ಏರಿಕೆಯಾಗಿದ್ದರೆ ದಕ್ಷಿಣದಲ್ಲಿ ಶೇ.೧೩೫ರಷ್ಟು ಮಾತ್ರ. ದಕ್ಷಿಣದಲ್ಲಿ ಬಿಜೆಪಿ ಗೆಲ್ಲಲ್ಲ ಎಂಬ ಕಾರಣಕ್ಕೆ ಈ ತಾರತಮ್ಯ ಎಂದು ಲಕ್ಷ್ಮಣ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಸಲೀಂ ಹ್ಯಾರಿಸ್, ಜಯೇಂದ್ರ, ಸೂರಜ್ ಹೊಸೂರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0