ಮಡಿಕೇರಿ:ಔಷಧಿ ಅಂಗಡಿಗಳಿಗೆ ಡಿಸಿ-ಎಸ್ಪಿ ಭೇಟಿ
admincoorgdaily

ಮಡಿಕೇರಿ: ನಗರದ ವಿವಿಧ ಔಷಧ ಅಂಗಡಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಹಾಗೂ ಎಸ್ಪಿ ಬಿಂದು ಮಣಿ ಅವರು ಭೇಟಿ ನೀಡಿ ಮಾದಕ ವಸ್ತುಗಳ ಮಾರಾಟ ತಡೆ ಮಾರ್ಗಸೂಚಿಯಂತೆ "ವೈದ್ಯರ ಸಲಹೆ ಇಲ್ಲದೆ ಔಷಧಿ ಮಾರಾಟ ಮಾಡದಿರುವ ಬಗ್ಗೆ" ಸೂಚನಾ ಫಲಕವನ್ನು ಅಳವಡಿಸಿರುವ ಬಗ್ಗೆ ಪರಿಶೀಲಿಸಿ ನಿಷೇಧಿತ ಹಾಗೂ ಅವಧಿ ಮೀರಿದ ಔಷಧಿಗಳನ್ನು ಮಾರಾಟ ಮಾಡದಂತೆ ಸೂಚನೆಗಳನ್ನು ನೀಡಿದರು.