ಮಡಿಕೇರಿ ದಸರಾ ಜನೋತ್ಸವ:DYSP ಸೂರಜ್ ಅವರ ಮೇಲೆ ಹಲ್ಲೆ ಪ್ರಕರಣ ಓರ್ವನ ಬಂಧನ| ಅಕ್ಟೋಬರ್ ‌16ರವರೆಗೆ ನ್ಯಾಯಾಂಗ ಬಂಧನ

ಮಡಿಕೇರಿ ದಸರಾ ಜನೋತ್ಸವ:DYSP ಸೂರಜ್ ಅವರ ಮೇಲೆ ಹಲ್ಲೆ ಪ್ರಕರಣ  ಓರ್ವನ ಬಂಧನ| ಅಕ್ಟೋಬರ್ ‌16ರವರೆಗೆ ನ್ಯಾಯಾಂಗ ಬಂಧನ

ಮಡಿಕೇರಿ: ದಸರಾ ಜನೋತ್ಸವ ದಶಮಂಟಪಗಳ ಸ್ಪರ್ಧೆಯ ತೀರ್ಪುಗಾರಿಕೆಯಲ್ಲಿ ಮೋಸ ಎಂದು ಆರೋಪಿಸಿ ಯುವಕರು ಗುಂಪೊಂದು ದಸರಾ ವೇದಿಕೆ ಮೇಲೇರಿ ದಾಂಧಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಡಿಕೇರಿ ಡಿ.ವೈ.ಎಸ್.ಪಿ ಅವರ ಮೇಲೆ ಹಲ್ಲೆ ಮಾಡಿ ತಳ್ಳಿದ್ದರು.ಸೂರಜ್ ಅವರಿಗೆ ತಲೆ ಹಾಗೂ ಕಾಲುಗಳಿಗೆ ಪೆಟ್ಟಾಗಿದ್ದು,ಇದೀಗ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆರೋಪಿ‌ ಯುವಕ ರಕ್ಷಿತ್ ನನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ಅ.16ರವರೆಗೆ ನ್ಯಾಯಾಂಗ ಬಂಧನಕ್ಕೆ ‌ಒಪ್ಪಿಸಿದೆ.