ಮಡಿಕೇರಿ: AC ಬಸ್‌ನಲ್ಲಿ AC ಇಲ್ಲ: KSRTCಗೆ 13,000 ರೂ. ಪರಿಹಾರ ನೀಡಲು ಗ್ರಾಹಕ ಆಯೋಗ ಆದೇಶ

Jun 17, 2026 - 14:42
Jun 17, 2026 - 14:43
 0  874
ಮಡಿಕೇರಿ: AC ಬಸ್‌ನಲ್ಲಿ AC ಇಲ್ಲ: KSRTCಗೆ 13,000 ರೂ. ಪರಿಹಾರ ನೀಡಲು ಗ್ರಾಹಕ ಆಯೋಗ ಆದೇಶ

ಮಡಿಕೇರಿ: ತಾಲ್ಲೂಕಿನ ಬಿಳಿಗೇರಿ ಗ್ರಾಮದ ನಿವಾಸಿಯಾದ ಸಚಿತ್ ಕೆ.ಹೆಚ್ , 06.11.2025 ರಂದು ಮಡಿಕೇರಿಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ನಿಗಮದ ಈವಿ ಪವರ್ ಪ್ಲಸ್ ಬಸ್‌ ನಲ್ಲಿ ಪ್ರಯಾಣಿಸುತ್ತಿರುವ ಸಮಯದಲ್ಲಿ ಮಧ್ಯ ಮಾರ್ಗದಲ್ಲಿ ಸದರಿ ಬಸ್ಸ್ ಹವಾ ನಿಯಂತ್ರಣ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಯಿಸದೆ ಉಸಿರುಗಟ್ಟುವ ತೊಂದರೆ ಅನುಭವಿಸಿದ್ದಾರೆ.

ಈ ಬಗ್ಗೆ ಬಸ್ಸಿನ ನಿರ್ವಾಹಕರಿಗೆ ಮಹಿತಿ ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳಲ್ಲಿಲ್ಲ. ಸದರಿ ಬಸ್‌ನಲ್ಲಿ ಕಿಟಕಿ ತೆಗೆಯುವ ವ್ಯವಸ್ಥೆ ಕೂಡ ಇರುವುದಿಲ್ಲ. ಸಚಿತ್ ಅವರು ಅನುಭವಿಸಿದ ತೊಂದರೆಗಳಿಗೆ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಪರಿಹಾರ ಕೋರಿ ದೂರು ದಾಖಲಿಸಿದ್ದರು.

ಏ.ಸಿ ಬಸ್ ಸೌಲಭ್ಯಕ್ಕಾಗಿ ಮುಂಗಡವಾಗಿ ತೆರಿಗೆ ಒಳಗೊಂಡ ಟಿಕೆಟ್ ದರ ಪಾವತಿಸಿ, ಕಾಯ್ದಿರಿಸಿ ಮೇಲೆ ಏ.ಸಿ ಕೆಲಸ ಮಾಡುತ್ತಿಲ್ಲ ಎಂದರೆ ಪರ್ಯಾಯ ವ್ಯವಸ್ಥೆಯನ್ನು ಮೈಸೂರು ಬಸ್ ನಿಲ್ದಾಣದಲ್ಲಿ ಮತ್ತೊಂದು ತಮ್ಮ ನಿಗಮದ ಏ.ಸಿ ಬಸ್ಸಿನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲು ನಿಗಮದವರ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷರಾದ ಡಾ|| ರೇಣುಕಾಂಬ.ಸಿ ಮತ್ತು ಸದಸ್ಯರಾದ ಗೌರಮ್ಮಣ್ಣಿ ತಿಳಿಸಿ, ಒಟ್ಟು ರೂ. 13000/-ಗಳು ಮತ್ತು ಬಡ್ಡಿ ಶೇ.9 ರಂತೆ ಪಾವತಿಸಬೇಕೆಂದು ಆದೇಶ ನೀಡಿದ್ದಾರೆ.

What's Your Reaction?

Like Like 4
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1