ಮಾಲ್ದಾರೆ: ಜನಪರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ
ಸಿದ್ದಾಪುರ:ಜನಪರ ಕ್ರೀಡಾ ಮತ್ತು ಕಲಾ ಯುವ ಜನ ಸಂಘ (ರಿ )ಮಾಲ್ದಾರೆ ಇವರ ವತಿಯಿಂದ 79 ಸ್ವಾತಂತ್ರ್ಯ ದಿನಾಚರಣೆಯನ್ನು ಗುಡ್ಲೂರು ಗ್ರಾಮದ ಗಾಂಧಿ ಭಾವಚಿತ್ರ ಬಳಿ ಆಚರಿಸಲಾಯಿತು. ರಾಜ್ಯ ಪ್ರಶಸ್ತಿ ವಿಜೇತೆ ದಾದಿ ಶ್ರೀಮತಿ ಸೂದನ ತಾಯಮ್ಮರವರು ಧ್ವಜಾರೋಹಣ ನೆರವೇರಿಸಿದರು ಇದೆ ಸಂದರ್ಭ ಇವರನ್ನು ಸಂಘದ ವತಿಯಿಂದ ಸನ್ಮಾನ್ಯ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಸೇವಕರದ ಪ್ರಭಾಕರ್,ಶರೀಫ್, ಅಬುಟ್ಟಿ, ಅಗಸ್ಟೀನ್,ಜನಪರ ಸಂಘ ದ ಅಧ್ಯಕ್ಷ ಭಾವ ಮಾಲ್ದಾರೆ, ಸಂಸ್ಥಾಪಕ ಅಧ್ಯಕ್ಷ ಅಂಟೋನಿ, ಗ್ರಾಮಸ್ಥರು ಮುಂತಾದವರು ಹಾಜರಿದ್ದರು.