ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕುರಿತು ಮುಸ್ಲಿಂ ಜಮಾಅತ್ ಗಳ ಒಕ್ಕೂಟದ ವತಿಯಿಂದ ಸಭೆ
ಮಡಿಕೇರಿ: ಮುಸ್ಲಿಂ ಜಮಾಅತ್ ಗಳ ಒಕ್ಕೂಟ ಮಡಿಕೇರಿ ವತಿಯಿಂದ ಮಡಿಕೇರಿಯ ಬದ್ರಿಯ ಜಮಾತ್ ಆಡಿಟೋರಿಯಂ ನಲ್ಲಿ ಸರ್ಕಾರದ ವತಿಯಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕುರಿತು ಸಂಪನ್ಮೂಲ ವ್ಯಕ್ತಿಯಾದ ಪಿಡಿಓ ಅಬ್ದುಲ್ಲ ರವರಿಂದ ತರಗತಿ ಹಾಗೂ ಸಭೆಯಲ್ಲಿ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮುಸ್ಲಿಂ ಜಮಾತ್ಗಳ ಒಕ್ಕೂಟದ ಕಾರ್ಯದರ್ಶಿಯಾದ ಅಮೀನ್ ಮೂಹಿಸಿನ್ ಮಾತನಾಡಿ, ಸರ್ಕಾರದ ವತಿಯಿಂದ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ನಮ್ಮ ಜನಾಂಗದ ನೈಜ ಸ್ಥಿತಿಗತಿಗಳನ್ನು ನಮೂದಿಸಿಕೊಳ್ಳಬೇಕು. ಕುಲಶಾಸ್ತ್ರ ಅಧ್ಯಯನದ ವರದಿ ಹಿನ್ನೆಲೆಯಲ್ಲಿ ಜಾತಿ ಜನಸಂಖ್ಯೆಯ ಅನುಪಾತದಡಿಯಲ್ಲಿ ಸರ್ಕಾರ ಹಾಗೂ ನ್ಯಾಯಾಲಯ ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ಹಾಗೂ ಅನುದಾನಗಳು ನೀಡಲು ಮುಂದಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಸಮೀಕ್ಷೆದಾರರು ಮನೆಗೆ ಬಂದಾಗ ಧರ್ಮ: ಇಸ್ಲಾಂ ಜಾತಿ : ಮುಸ್ಲಿಂ ಉಪಜಾತಿ ಹಾಗೂ ಭಾಷೆ : ತಮ್ಮ ಉಪಜಾತಿ ಹಾಗೂ ಮಾತೃಭಾಷೆಯನ್ನು ನಮೂದಿಸಬೇಕೆಂದು ಮುಸ್ಲಿಂ ಜಮಾತ್ಗಳ ಒಕ್ಕೂಟದ ಸಭೆಯ ಒಮ್ಮತ ತೀರ್ಮಾನದಂತೆ ನಿರ್ಣಯ ಕೈಗೊಳ್ಳಲಾಯಿತು.
ತಮ್ಲಿಕ್ ದಾರಿಮಿ ಅವರು ಉದ್ಘಾಟನೆ ಭಾಷಣ ಮಾಡಿದರು, ಹನೀಫ್ ದಾರಿಮಿ ನಿರೂಪಿಸಿದರು. ಸಭೆಯಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರು ನಜೀರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಂಸ, ಯೂತದ ಕಾಂಗ್ರೆಸ್ ಮೈಸಿ, ಉಮ್ಮತ್ ವನ್ ಕಾರ್ಯದರ್ಶಿ ಕಾಲಿದ್, ಕುಶಾಲನಗರ ಹಿಲಾಲ್ ಮಸೀದಿಯ ಕರೀಂ, ಹನೀಫ್, ಹಾರುನ್, ಸಲೀಂ,ಬಶೀರ್ ಕೌನ್ಸಿಲರ್ಗಳಾದ ಬಶೀರ್, ಮನ್ಸೂರ್, ಇಮ್ರಾನ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.