ನಾಪಂಡ ಮುತ್ತಪ್ಪ & ಮುದ್ದಪ್ಪ ಅಭಿಮಾನೋತ್ಸವ

May 13, 2026 - 13:49
 0  454
ನಾಪಂಡ ಮುತ್ತಪ್ಪ & ಮುದ್ದಪ್ಪ ಅಭಿಮಾನೋತ್ಸವ

ಮಡಿಕೇರಿ: ಸಮಾಜ ಸೇವಕರು,ಹಾಗೂ ಉದ್ಯಮಿಗಳು ಆದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಅಭಿಮಾನೋತ್ಸವ ಹಾಗೂ ಔತಣ ಕೂಟ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರಿನ ರಾಮೇಶ್ವರ ರೈತ ಸಹಾಕಾರ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

 ಅಭಿಮಾನೋತ್ಸವದ ಅಂಗವಾಗಿ ನಾಪಂಡ ಮುತ್ತಪ್ಪ ಮುದ್ದಪ್ಪ ಅಭಿಮಾನಿಗಳು ಆಗಮಿಸಿ ಅವಳಿ ಸಹೋದರರಿಗೆ ಹೂ ಹಾರ, ಹೂ ಗುಚ್ಚ ನೀಡಿ ಶುಭಹಾರೈಸಿದರು.‌ಕುಶಾಲನಗರ ಮಾತ್ರವಲ್ಲದೆ ಸುತ್ತಮುತ್ತಲ್ಲಿನ ನೂರಾರು ಅಭಿಮಾನಿಗಳು ಆಗಮಿಸಿ ನೆಚ್ಚಿನ ನಾಯಕರಿಗೆ ಶುಭಹಾರೈಸಿದರು. ಚುನಾವಣೆ ಮುಗಿದ ನಂತರದಲ್ಲಿ ಅಭಿಮಾನಿಗಳೊಂದಿಗೆ ಸೇರಲು ಸಾಧ್ಯವಾಗಿರಲ್ಲಿಲ್ಲ. ಹೀಗಾಗಿ ಈ ಒಂದು ಸಂತೋಷ ಕೂಟವನ್ನ ಅಭಿಮಾನಿಗಳಿಗಾಗಿಯೇ ಏರ್ಪಡಿಸಲಾಗಿತ್ತು. ಮುಖ್ಯವಾಗಿ ನಮ್ಮ ಹಿಂದೆ ನಿಂತ ಅಭಿಮಾನಿಗಳನ್ನ ಸಂತೋಷ ಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿರೋದಾಗಿ ತಿಳಿಸಿದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0