ನಾಪೋಕ್ಲು:20 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಎಸ್ ಪೊನ್ನಣ್ಣ
ನಾಪೋಕ್ಲು:ಕೊಡವ ಸಮಾಜ ಎದುರು ಹಾದು ಹೋಗುವ ರಸ್ತೆಯ ಅಭಿವೃದ್ಧಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರುಭೂಮಿ ಪೂಜೆ ನೆರವೇರಿಸಿದರು. ಅತ್ಯಂತ ಜನಸಂದಣಿ ಹಾಗೂ ವಾಹನ ಸಂಚಾರವಿರುವ ಈ ರಸ್ತೆ ಹದಗೆಟ್ಟಿರುವುದನ್ನು ಮನಗಂಡ ಶಾಸಕರು, ಸುಮಾರು ₹ 20 ಲಕ್ಷಗಳ ಅನುದಾನದಲ್ಲಿ ಈ ರಸ್ತೆಯ ಉನ್ನತೀಕರಣ ಮಾಡಲು ಅನುದಾನ ಒದಗಿಸಿದ್ದರು.
ಇಂದು ಈ ಕಾಮಗಾರಿ ಆರಂಭಿಸಲು ಭೂಮಿಪೂಜೆ ನೆರವೇರಿಸಿ ಶುಭಕೋರಿದ ಶಾಸಕರು, ಅತ್ಯಂತ ಶೀಘ್ರದಲ್ಲಿ ಹಾಗೂ ಗುಣಮಟ್ಟ ಕಾಯ್ದುಕೊಂಡು ಈ ರಸ್ತೆ ಜನರ ಬಳಕೆಗೆ ಉಪಯೋಗವಾಗುವಂತರಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಮಡಿಕೇರಿ ತಾಲೂಕಿಗೆ ನೀಡಲಾದ ಮಲತ್ಯಾಜ್ಯ ನಿರ್ವಹಣಾ ಸಂಚಾರಿ ಘಟಕವನ್ನು ಶಾಸಕರು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಅಧ್ಯಕ್ಷರಾದ ಕುಶಾಲಪ್ಪ, ನಾಪೋಕ್ಲು ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ, ಅರುಣ್ ಬೇಬ, ಹೇಮಾವತಿ ಅರುಣ್ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಗ್ಯಾರಂಟಿ ಅನುಷ್ಠಾನ ಸದಸ್ಯರು, ನಾಪೋಕ್ಲು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು, ಪಕ್ಷದ ಪ್ರಮುಖರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.