ನಾಪೋಕ್ಲು:ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ
admincoorgdaily

ಮಡಿಕೇರಿ ನಾಪೋಕ್ಲುವಿನಲ್ಲಿ ಪತ್ರಕರ್ತ ಮತ್ತು ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಝಕರಿಯ ಎಂಬುವರ ಮೇಲೆ ಕಿಡಿಗೇಡಿಗಳಿಂದ ಮಾರಣಾಂತಿಕ ಹಲ್ಲೆಯಾಗಿದೆ.
ಪತ್ರಕರ್ತ ಝಕರಿಯ ಅವರನ್ನು ಅಪಹರಸಿ ಮರಣಾಂತಿಕ ಹಲ್ಲೆ ಎಸಗಿದ ಬಳಿಕ ಸಾವಿಗೀಡಾಗಿರಬಹುದೆಂದು ಭ್ರಮಿಸಿ, ಚರಂಡಿಗೆ ತಳ್ಳಿ ಹಾಕಿ ಯುವಕರು ಪರಾರಿಯಾಗಿದ್ದಾರೆ. ಆಸ್ತಿ ವೈಶಮ್ಯ ಹಿನ್ನೆಲೆಯಲ್ಲಿ ಹಲ್ಲೆ ಎಸಗಿರುವ ಆರೋಪ ಕೇಳಿ ಬಂದಿದ್ದು, ಗಾಯಾಳು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದೆ.
ನಾಪೋಕ್ಲುವಿನ ನಾಫಿ ಮತ್ತು ಸಿದ್ದಿಕ್ ಎಂಬ ಯುವಕರ ತಂಡ ಹಲ್ಲೆ ಎಸಗಿರುವ ಆರೋಪ ವ್ಯಕ್ತವಾಗಿದ್ದು, ಘಟನೆ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಝಕರಿಯ ಅವರಿಗೆ ದೂರವಾಣಿ ಕರೆ ಮಾಡಿ ಶಾಸಕ ಎ.ಎಸ್.ಪೊನ್ನಣ್ಣ ಆರೋಗ್ಯ ವಿಚಾರಿಸಿದ್ದಾರೆ.