ಮೈಸೂರು-ಕೊಡ್ಲಿಪೇಟೆ-ಧರ್ಮಸ್ಥಳ ನೂತನ ಬಸ್ಸ್ ಗೆ ಚಾಲನೆ

ಮೈಸೂರು-ಕೊಡ್ಲಿಪೇಟೆ-ಧರ್ಮಸ್ಥಳ ನೂತನ ಬಸ್ಸ್ ಗೆ ಚಾಲನೆ

ಕೊಡ್ಲಿಪೇಟೆ : ಮ್ಯೆಸೂರು ಧರ್ಮಸ್ಥಳ ಸಂಚಾರ ಪ್ರಾರಂಭಿಸಿದ ನೂತನ ಅಶ್ವಮೇಧ ಬಸ್ ಗೆ ಕೊಡ್ಲಿಪೇಟೆಯಲ್ಲಿ ಬರಮಾಡಿಕೊಂಡು ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅರಕಲಗೂಡು ಡಿಪೋದಿಂದ ನೂತನ ಬಸ್ ಬಿಡಲಾಗಿದ್ದು, ಕೊಡ್ಲಿಪೇಟೆ ವ್ಯಾಪ್ತಿಯ ಜನರ ಬಹುದಿನದ ಬೇಡಿಕೆಯಾಗಿದ್ದ ಧರ್ಮಸ್ಥಳಕ್ಕೆ ನೇರ ಬಸ್ ಮಾರ್ಗಕ್ಕೆ ಇಂದು ಚಾಲನೆ ಸಿಕ್ಕಿದೆ. ಕೊಡ್ಲಿಪೇಟೆಗೆ ಸಂಜೆ 5 ಗಂಟೆಗೆ ಆಗಮಿಸಿದ ಬಸ್ ಗೆ ಗ್ರಾ.ಪಂ.ಜನಪ್ರತಿನಿಧಿಗಳು ಸರಕಾರಿ ನಾಮ ನಿರ್ದೇಶಿತ ಸದಸ್ಸರುಗಳು ,ಹಾಗೂ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಬಾಳೆ ದಿಂಡನ್ನು ಕಟ್ಟಿ ತೆಂಗಿನಕಾಯಿ ಹೊಡೆದು,ಸಿಹಿ ಹಂಚಿ ಸಂಭ್ರಮದ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ತಾಲೂಕು ಕೆಡಿಪಿ ಸಮಿತಿಯ ಸದಸ್ಯರಾದ ಔರಂಗಜೇಬ್ ಈ ಕಾರ್ಯಕ್ರಮಕ್ಕೆ ಖುದ್ದು ಶಾಸಕರಾದ ಮಂತರ್ ಗೌಡ ರವರು ಆಗಮಿಸಿ ಚಾಲನೆ ನೀಡಬೇಕಿತ್ತು. ಕಾರ್ಯನಿಮಿತ ಬೆಂಗಳೂರಿಗೆ ತುರ್ತಾಗಿ ತೆರಳಬೇಕಾಗಿದ್ದರಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ನೂತನ ಸಾರಿಗೆ ಸೇವೆಯು ಶಾಸಕ ಡಾ ಮಂತರ್‌ಗೌಡ ಮತ್ತು ಅರಕಲಗೂಡು ಶಾಸಕರ ಪ್ರಯತ್ನದಿಂದ ಸಾಧ್ಯವಾಗಿದೆ ಎಂದರು. 

 ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಕೆ.ಆರ್.ಚಂದ್ರಶೇಖರ್ ರವರು, ಮಾತನಾಡಿ ನೂತನ ಬಸ್ ಸೇವೆಯಿಂದ ಈ ಭಾಗದ ಜನರಿಗೆ ಪುಣ್ಯಕ್ಷೇತ್ರ ಧರ್ಮಸ್ಥಳ ಮತ್ತು ಮ್ಯೆಸೂರಿಗೆ ತೆರಳಲು ನೇರ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು. ಸಾರಿಗೆ ವ್ಯವಸ್ಥೆ ಕಲ್ಪಿಸಿದ ಶಾಸಕರುಗಳು ಹಾಗೂ ಸರಕಾರಿ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ಧನ್ಯವಾದ ಅರ್ಪಿಸಿದರು.

 ಬಸ್ ಪ್ರತಿ ದಿನ ಮೈಸೂರು ನಿಂದ ಮಧ್ಯಾಹ್ನ 12:30ಕ್ಕೆ ಹೊರಟು, ಕೆ.ಆರ್.ನಗರ, ಚುಂಚನಕಟ್ಟೆ, ಸಾಲಿಗ್ರಾಮ, ಕೊಣನೂರು, ಅರಕಲಗೂಡು, ಮಾರ್ಗವಾಗಿ, ಕೊಡ್ಲಿಪೇಟೆ ಗೆ ಸಂಜೆ 04:20ಕ್ಕೆ ತಲುಪಿ ಕೊಡ್ಲಿಪೇಟೆಯಿಂದ 04:30 ಕ್ಕೆ ಹೊರಟು ಬಾಳ್ಳುಪೇಟೆ, ಸಕಲೇಶಪುರ, ಗುಂಡ್ಯ ಮಾರ್ಗವಾಗಿ ಧರ್ಮಸ್ಥಳಕ್ಕೆ ರಾತ್ರಿ 08:00 ಗಂಟೆಗೆ ತಲುಪುತ್ತದೆ. ಮರುದಿನ ಧರ್ಮಸ್ಥಳ ದಿಂದ ಬೆಳಗ್ಗೆ 06:30ಕ್ಕೆ ಹೊರಟು ಗುಂಡ್ಯ ಸಕಲೇಶಪುರ ಮಾರ್ಗವಾಗಿ ಕೊಡ್ಲಿಪೇಟೆಗೆ 09:40 ಕ್ಕೆ ತಲುಪಿ ಕೊಡ್ಲಿಪೇಟೆಯಿಂದ 09:45ಕ್ಕೆ ಹೊರಟು ಅರಕಲಗೂಡು, ಕೊಣನೂರು, ಸಾಲಿಗ್ರಾಮ, ಕೆ.ಆರ್. ನಗರ ಮಾರ್ಗವಾಗಿ ಮಧ್ಯಾಹ್ನ 01:30 ಕ್ಕೆ ಮೈಸೂರು ತಲುಪಲಿದೆ ಎಂದು ಚಾಲಕ ಧರಣೇಂದ್ರ ಮಾಹಿತಿ ನೀಡಿದರು.

 ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಪ್ಸರಿಬೇಗಂ ,ಉಪಾಧ್ಯಕ್ಷೆ ಯಶೋದಮ್ಮ ,ಸದಸ್ಯರುಗಳಾದ ವಹಾಬ್,ಪ್ರಸನ್ನ ,ಬ್ಯಾಡಗೊಟ್ಟ ಪಂಚಾಯತ್ ಅಧ್ಯಕ್ಷರಾದ ಪಾವನ ,ಸದಸ್ಯರಾದ ಹನೀಫ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜನಾರ್ದನ್, ತಾಲೂಕು ಕೆಡಿಪಿ ಸದಸ್ಯ ವೇದಕುಮಾರ್, ಮುಖಂಡರುಗಳಾದ ಸುಲೈಮಾನ್ ,ಸಾಬ್‌ಜಾನ್ ,ನಿಸಾರ್,ಜಯಪ್ಪ,ಮಲ್ಲೇಶ್, ಪ್ರೆಮಕುಮಾರ್ ,ಹಾಲಪ್ಪ ,ಇಂದ್ರೇಶ್ ,ನಿಖಿಲ್ ,ಉಮೇಶ್ ,ಗಣೇಶ್ , ಸುಮಂತ್ ,ಸುಹೀಲ್ , ನಜೀರ್ ಅಹಮ್ಮದ್, ಬಿ.ಕೆ.ಯತೀಶ್ ,ಜಿ.ಆರ್.ಸುಬ್ರಹ್ಮಣ್ಯ ,ವರ್ತಕ ರಾದ ಶಿವರಾಜ್, ಮುಂತಾದವರು ಹಾಜರಿದ್ದರು.