ಫುಟ್ಬಾಲ್ ಪಂದ್ಯ ಆಡಲು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಬಲಿಷ್ಠವಾಗಿರಬೇಕು: ಶಾಸಕ ಎ‌ಎಸ್ ಪೊನ್ನಣ್ಣ ಅಭಿಪ್ರಾಯ

ಫುಟ್ಬಾಲ್ ಪಂದ್ಯ ಆಡಲು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಬಲಿಷ್ಠವಾಗಿರಬೇಕು: ಶಾಸಕ ಎ‌ಎಸ್ ಪೊನ್ನಣ್ಣ ಅಭಿಪ್ರಾಯ

ಗೋಣಿಕೊಪ್ಪ:ಪ್ರಗತಿ ಆಟೋ ಚಾಲಕರು ಹಾಗೂ ಮಾಲಕರ ಸಂಘ ಗೋಣಿಕೊಪ್ಪ (ರಿ), ಇವರು ಆಯೋಜಿಸಿದ ಫುಟ್ಬಾಲ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

 ಗೋಣಿಕೊಪ್ಪಲುವಿನ ಜಿಹೆಚ್ ಎಸ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯಾಟದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದ ಶಾಸಕರು, ದಸರಾ ಸಂದರ್ಭದಲ್ಲಿ ನಡೆಯುತ್ತಿರುವ ಈ ಫುಟ್ಬಾಲ್ ಪಂದ್ಯಾಟ ಇಲ್ಲಿನ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವಂತಾಗಲು ಇದೊಂದು ಉತ್ತಮ ವೇದಿಕೆ ಎಂದು ಬಣ್ಣಿಸಿದರು.

ಸಮಾಜಕ್ಕೆ ಹಾಗೂ ಜನರಿಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರು ಇಂತಹ ಪಂದ್ಯಾಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವುದು ಸಂತೋಷ ತಂದಿದೆ. ಫುಟ್ಬಾಲ್ ಪಂದ್ಯ ಆಡಲು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಬಲಿಷ್ಠವಾಗಿರಬೇಕು. ಈ ಪಂದ್ಯಾಟವು ಯಶಸ್ಸು ಕಂಡು ಸಾಮರಸ್ಯ ಹಾಗೂ ಸಹಬಾಳ್ವೆಗೆ ನಾಂದಿಯಾಗಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಪ್ರಗತಿ ಆಟೋ ಚಾಲಕರು ಹಾಗೂ ಮಾಲಕರ ಸಂಘದ ಗೌರವ ಅಧ್ಯಕ್ಷರಾದ ಕುಲಚಂಡ ಪ್ರಮೋದ್ ಗಣಪತಿ, ಅಧ್ಯಕ್ಷರಾದ ಡಾಡು ಜೋಸೆಫ್, ಚೇರಂಡ ಮೋಹನ್, ಬಯವಂಡ ಮಹಾಬಲ, ಪಾಲ್ವಿನ್ ಪೂಣಚ್ಚ, ದರ್ಶನ್, ಮಲಂಡ ಧ್ಯಾನ್, ಜಿವಿತ್, ನಾಯಂದಿರ ಶಿವಾಜಿ, ಹರೀಶ್ ಪೂವಯ್ಯ, ಪ್ರೀತಮ್ ಹ್ಯಾರೀಶ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.