ಪೆರುಂಬಾಡಿ; ಮೇ 05ರಂದು ಅಗ್ನಿ ಚಾಮುಂಡಿ ದೇವಿ ವಾರ್ಷಿಕ ತೆರೆ ಮಹೋತ್ಸವ

May 2, 2026 - 12:41
 0  187
ಪೆರುಂಬಾಡಿ; ಮೇ 05ರಂದು ಅಗ್ನಿ ಚಾಮುಂಡಿ ದೇವಿ ವಾರ್ಷಿಕ ತೆರೆ ಮಹೋತ್ಸವ

ವಿರಾಜಪೇಟೆ: ಮೇ:01: ಗ್ರಾಮ ದೇವತೆಯಾಗಿ ವಿಜ್ರಂಬಿಸಿ ಹರಸಿ ನೆಲೆ ನಿಂತು ಅಗ್ನಿಯ ಜ್ವಾಲೆ ಯಲ್ಲಿ ತನ್ನ ಪ್ರತಿಬಿಂಬ ಕಾಣುವಂತೆ ಹರಸುವ ಶ್ರೀ ಅಗ್ನಿ ಚಾಮುಂಡಿ ದೇವಿಯ ವಾರ್ಷಿಕ ತೆರೆ ಮಹೋತ್ಸವ ತಾ. ೦೫ ರಂದು ಜರುಗಲಿದೆ.

 ವಿರಾಜಪೇಟೆ ತಾಲ್ಲೂಕಿನ ಪೆರುಂಬಾಡಿ ಬಾಳೋಗೊಡು ಗ್ರಾಮದಲ್ಲಿ ನೆಲೆನಿಂತ ಶ್ರೀ ಅಗ್ನಿ ಚಾಮುಂಡಿ ದೇವಿಯ ವಾರ್ಷಿಕ ತೆರೆ ಮಹೋತ್ಸವ ವು ತಾ.05 ಮತ್ತು 06 ರಂದು ಜರುಗಲಿದೆ. ತಾ. 05 ರಂದು ಬೆಳಿಗ್ಗೆ ಗಣ ಹೋಮ,ದೇವರ ದರ್ಶನ, ತಕ್ಕರ ಮನೆಯಿಂದ ಭಂಡಾರ ತರುವುದು, ನಾಗ, ಗುಳಿಗ,ಚಾಮುಂಡಿ, ಗೆ ಅಭಿಷೇಕ ಪೂಜೆ ,ಚಾಮುಂಡಿ ದೇವಿಗೆ ಮಾಹಾಪೂಜೆ ಪ್ರಸಾದ ವಿನಿಯೋಗ ಜರುಗಲಿದೆ.

ಸಂಜೆ ಉತ್ಸವ ಪ್ರಾರಂಭಗೊಂಡು ಕೊಟ್ಟಿ ಹಾಡುವುದು ಕಟ್ಟಿಗೆಗೆ ಅಗ್ನಿ ಸ್ಪರ್ಶ, ನಂತರ ಕ್ರಮವಾಗಿ ಕುಟ್ಟಿಚಾತ,ಕಾಲಬೈರವ, ಕರಿವಾಳ್ ಭಗವತಿ ಮತ್ತು ನುಚ್ಚುಟ್ಟೆ ತೆರೆಗಳು ನಡೆಯಲಿದೆ. ತಾ.06 ರಂದು ಬೆಳಿಗ್ಗೆ ವಿಷ್ಣು ಮೂರ್ತಿ ತೆರೆ ಮೇಲೇರಿ ಬೀಳುವುದು, ಗುಳಿಗ ತೆರೆ ನಡೆಯಲಿದೆ.ಅನ್ನಸಂತರ್ಪಣೆ ಬಳಿಕ ಬಸಿರಿ ತೆರೆ( ಚಾಮುಂಡಿ ತೆರೆ )ಹೊರಡುವುದು ಸಂಜೆ ಇಷ್ಟಾರ್ಥ ಇಡೆರಿಸುವಂತೆ ಹರಕೆಹೊತ್ತ ಭಕ್ತರಿಂದ ಹರಕೆ ಸ್ವೀಕರಿಸುವುದು ನಡೆಯಲಿದೆ.

 ತದ ನಂತರ ರಾತ್ರಿ ಚಾಮುಂಡಿ ದೇವಿಗೆ ನೇವೆದ್ಯ ಅರ್ಪಣೆ ನಡೆಯಲಿದೆ. ಎರಡು ದಿನಗಳು ನಡೆಯುವ ತೆರೆ ಮಹೋತ್ಸವ ದಲ್ಲಿ ನಾಡಿನ ಸರ್ವ ಭಕ್ತಾದಿಗಳು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗುವಂತೆ ದೇಗುಲ ಸಮಿತಿಯು ಮನವಿ ಮಾಡಿದೆ.

 ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0