ಪೊನ್ನಂಪೇಟೆ: ಅಂಗನವಾಡಿಯಲ್ಲಿ LKG&UKG ತರಗತಿ ಉದ್ಘಾಟಿಸಿ ಎ.ಎಸ್ ಪೊನ್ನಣ್ಣ
ಪೊನ್ನಂಪೇಟೆ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪುಟಾಣಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆಯ ಕಾರ್ಯಕ್ರಮದ ಅಂಗವಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಪೊನ್ನಂಪೇಟೆಯ ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ಆರಂಭಗೊಂಡಿರುವ ಎಲ್.ಕೆ.ಜಿ ಹಾಗೂ ಯುಕೆಜಿ ತರಗತಿಗಳನ್ನು ಉದ್ಘಾಟನೆ ಮಾಡಿದರು.
ಶಾಸಕರು, ಇಂದಿನ ಆಧುನಿಕ ಯುಗದಲ್ಲಿ ಸಾಧನೆ ಮಾಡಲು ಇಂಗ್ಲೀಷ್ ಭಾಷೆಯ ತಿಳುವಳಿಕೆ ಅತಿ ಅವಶ್ಯಕ ಆಗಿದೆ. ಈ ನಿಟ್ಟಿನಲ್ಲಿ ಚಿಂತಿಸಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರವು ಕನ್ನಡದೊಂದಿಗೆ ಆಂಗ್ಲ ಭಾಷೆಯನ್ನು ಮಕ್ಕಳಿಗೆ ಹೇಳಿಕೊಡುವ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಅಂಗನವಾಡಿಯಲ್ಲಿ ಇರುವ ಶಿಕ್ಷಕಿಯರು ಹಾಗೂ ಸಹಾಯಕಿಯರು ಮಕ್ಕಳಲ್ಲಿ ಇಂಗ್ಲಿಷ್ ಕಲಿಕೆಯ ಆಸಕ್ತಿಯನ್ನು ಮೂಡುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಪಂಚಾಯಿತಿ ಅಧ್ಯಕ್ಷರಾದ ಅಣ್ಣೀರ ಹರೀಶ್, ಉಪಾಧ್ಯಕ್ಷರಾದ ಆಲೀರ ರಶೀದ್, ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಗೋಪಿ, ಸದಸ್ಯರಾದ ಮುಕಳೇರ ಭಾರತಿ, ಸುನಿತಾ, ರಫೀಕ, ಝುನೈದ್, ರಾಮಕೃಷ್ಣ, ಹಿರಿಯರಾದ ಕುಶಾಲಪ್ಪ, ಪಕ್ಷದ ಪ್ರಮುಖರು ಬಾಬು, ಮೋಟಯ್ಯ, ಕುಸುಮ, ಧನ್ಯ, ಪಲ್ವಿನ್ ಪೂಣಚ್ಚ, ಉದಯ್, ಹರೀಶ್, ಪ್ರೀತಮ್, ಮಂಜು ದೇವಯ್ಯ, ತಾಲೂಕು ತಹಶೀಲ್ದಾರ್ ಮೋಹನ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಪ್ಪಣ್ಣ, ಅಂಗನವಾಡಿ ಶಿಕ್ಷಕಿಯರು, ಸಹಾಯಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.