ಪೊನ್ನಂಪೇಟೆ:ನೀರಾವರಿ ನಿಗಮದ ಅಧಿಕಾರಿಗೊಳಿಂದಿಗೆ ಸಭೆ ನಡೆಸಿದ ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ:ನೀರಾವರಿ ನಿಗಮದ ಅಧಿಕಾರಿಗೊಳಿಂದಿಗೆ ಸಭೆ ನಡೆಸಿದ ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ:ತಾಲ್ಲೂಕಿನಲ್ಲಿ ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ನೀರಾವರಿ ನಿಗಮ ಅನುದಾನದಲ್ಲಿ ಕ್ಷೇತ್ರಾದ್ಯಂತ ಕೈಗೊಳ್ಳಬೇಕಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆದರು. ಈ ಸಂದರ್ಭದಲ್ಲಿ ತಾಲೂಕು ಬಗರ್ ಹುಕುಂ ಅಧ್ಯಕ್ಷರು ಅಣ್ಣಳಮಾಡ ಲಾಲಾ ಅಪ್ಪಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಅಣ್ಣೀರ ಹರೀಶ್, ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.