ಜಿಲ್ಲಾ ಬಿಜೆಪಿಯಿಂದ ಪೋಸ್ಟ್ ಕಾರ್ಡ್ ಚಳುವಳಿ
ಮಡಿಕೇರಿ;ಇತ್ತೀಚೆಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿದ್ದು ಅದರಂತೆ ಈ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 6 ವಿಷಯ ಗಳಿಗೆ 625 ಅಂಕ ಗಳನ್ನು ನೀಡಲಾಗುತಿತ್ತು ಹಾಗೂ ಇದನ್ನು ಫಲಿತಾಂಶಕ್ಕೂ ಪರಿಗಣಿಸಲಾಗುತಿತ್ತು .
ಆದರೆ ಈಗೀನ ಸರ್ಕಾರದ ಅದಿ ಸೂಚನೆ ಯಂತೆ ತೃತೀಯ ಭಾಷೆಗೆ ಅಂಕದ ಬದಲು (ಶ್ರೇಣಿ ) ಗ್ರೇಡ್ ರೂಪದಲ್ಲಿ ನೀಡಲು ತೀರ್ಮಾನಿಸಿದ್ದು ಇದು ಉತ್ತಿರ್ಣ ರಾಗಲು ಪರಿಗಣಿಸಲಾಗುದಿಲ್ಲವೆಂದು ಆದೇಶಿಸಲಾಗಿದೆ. ಈ ಅಧಸೂಚನೆಯಿಂದ ನಮ್ಮ ರಾಜ್ಯದ ವಿದ್ಯಾರ್ಥಿ ಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ಭಾಷೆಯ ಮೇಲಿನ ಅಭಿಮಾನ ಕಡಿಮೆಯಾಗಲಿದ್ದು ಈ ಅಧಿಸೂಚನೆ ಹಿಂಪಡೆಯುವಂತೆ ಸರ್ಕಾರ ವನ್ನು ಒತ್ತಾಯಿಸಲು ಕೊಡಗು ಜಿಲ್ಲಾ ಬಿಜೆಪಿಯಿಂದ ಕಾರ್ಡ್ ಚಳುವಳಿ ಪ್ರಾರಂಭಿಸಿದ್ದಾರೆ.