ಕುಟ್ಟ ಹೋಂಸ್ಟೇಯಲ್ಲಿ ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ ಪ್ರಕರಣ; ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ; ಗೖಹ ಸಚಿವ ಡಾ.ಜಿ ಪರಮೇಶ್ವರ್
ಬೆಂಗಳೂರು:ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಹೋಂಸ್ಟೇಯಲ್ಲಿ ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಗೖಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕೊಡಗು ಪೊಲೀಸರು ಈವ೯ರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ಪ್ರಕರಣ ಖಂಡಿತವಾಗಿಯೂ ರಾಜ್ಯ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡಲಾರದು. ವಿಶೇಷವಾಗಿ ವಿದೇಶಿ ಪ್ರವಾಸಿಗರು ಅತಿಥಿಗಳಾಗಿ ಕನಾ೯ಟಕಕ್ಕೆ ಬಂದ ಸಂದಭ೯ ಇಂಥ ಘಟನೆ ನಡೆದಿರುವುದು ವಿಷಾದನೀಯ.
ಈ ಪ್ರಕರಣದಿಂದ ಯಾವ ರೀತಿಯ ಸಂದೇಶ ಸಮಾಜ, ಕನಾ೯ಟಕ ಮತ್ತು ಭಾರತದ ಬಗ್ಗೆ ವಿದೇಶದಲ್ಲಿ ಭಾವನೆ ಉಂಟಾದೀತು ಹೀಗಾಗಿಯೇ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಬದ್ದರಾಗಿದ್ದೇವೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಪ್ರಕರಣ ನಡೆದ ಬಳಿಕ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಗಳು ನಡೆದ ಬಗ್ಗೆ ಮಾಹಿತಿಗಳಿವೆ, ಆದರೆ ಪೊಲೀಸರು ಉತ್ತಮವಾಗಿ ಕಾಯ೯ನಿವ೯ಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆಂದು ಸಚಿವರು ಶ್ಲಾಘಿಸಿದ್ದಾರೆ.
ಹೋಂಸ್ಟೇಗಳನ್ನು ನಿವ೯ಹಿಸುತ್ತಿರುವವರು ಸರಿಯಾದ ರೀತಿಯಲ್ಲಿ ಅನುಮತಿ ಹೊಂದಿರಬೇಕಾಗಿದೆ. ಅನುಮತಿಯಿಲ್ಲದೇ ಹೋಂಸ್ಟೇಗಳನ್ನು ನಡೆಸುತ್ತಿರುವವರ ವಿರುದ್ದ ಕಾನೂನು ಕ್ರಮಕ್ಕೆ ಸೂಚಿಸಲಾಗುತ್ತದೆ. ವಿದೇಶಿ ಪ್ರವಾಸಿಗಳ ಮೇಲೆ ಅತ್ಯಾಚಾರ ನಡೆಸಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೋಂಸ್ಟೇಗೆ ಬಂದಿದ್ದ ವಾಷಿಂಗ್ಟನ್ ಪ್ರವಾಸಿ ಮಹಿಳೆಯ ಮೇಲೆ ಕುಟ್ಟ ಗ್ರಾಮದಲ್ಲಿನ ದೇವಿ ವಿಲ್ಲಾ ಹೋಂಸ್ಟೇ ಸಿಬ್ಬಂದಿ ಜಾಖ೯ಂಡ್ ಮೂಲದವ ಅತ್ಯಾಚಾರ ನಡೆಸಿದ್ದ. ಪ್ರಕರಣವನ್ನು ಮುಚ್ಚಿಹಾಕಲು ಹೋಂಸ್ಟೇ ಮಾಲೀಕರು ಪ್ರಯತ್ನಿಸಿದ್ದರು. ಜಾಖ೯ಂಡ್ ಮೂಲಕ ಸಿಬ್ಬಂದಿ 4 ವಷ೯ಗಳಿಂದ ಈ ಹೋಂಸ್ಟೇಯಲ್ಲಿ ಕಾಯ೯ ನಿವ೯ಹಿಸುತ್ತಿದ್ದ. ಹೋಂಸ್ಟೇ ಮಾಲೀಕನ ಪಾತ್ರದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಪರಮೇಶ್ವರ್ ಅವರು ಹೇಳಿದರು.