Kodagu

ಎಸ್‌ಐಆರ್ ಜಾಗೃತಿ ಸಮಾವೇಶ: ಕಾರ್ಯಕರ್ತರೊಂದಿಗೆ ಬಸ್‌ನಲ್ಲಿ ತೆರಳಿದ ಶಾಸಕ ಪೊನ್ನಣ್ಣ

admincoorgdaily

ಎಸ್‌ಐಆರ್ ಜಾಗೃತಿ ಸಮಾವೇಶ: ಕಾರ್ಯಕರ್ತರೊಂದಿಗೆ ಬಸ್‌ನಲ್ಲಿ ತೆರಳಿದ ಶಾಸಕ ಪೊನ್ನಣ್ಣ

ಮೈಸೂರು, ಜೂ. 26: ಮೈಸೂರಿನ ಜೆ.ಪಿ. ಮೈದಾನದಲ್ಲಿ ಇಂದು ನಡೆಯಲಿರುವ ಕೆಪಿಸಿಸಿ ವಿಭಾಗೀಯ ಎಸ್‌ಐಆರ್ ಜಾಗೃತಿ ಸಮಾವೇಶಕ್ಕೆ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬಸ್‌ನಲ್ಲಿ ತೆರಳಿದರು.

ಬೆಳಗ್ಗೆ ವಿರಾಜಪೇಟೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಶಾಸಕರು ಸಾವಿರಾರು ಕಾರ್ಯಕರ್ತರೊಂದಿಗೆ ಮೈಸೂರಿನತ್ತ ಪ್ರಯಾಣ ಬೆಳೆಸಿದರು. ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ಬಸ್ ಪ್ರಯಾಣದ ವೇಳೆ ಶಾಸಕರು ಕಾರ್ಯಕರ್ತರಿಗೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.