ರಕ್ತದ ಅಭಾವಕ್ಕೆ ತಕ್ಷಣ ಸ್ಪಂದಿಸಿದ ಎಸ್.ಕೆ.ಎಸ್.ಎಸ್.ಎಫ್. ಸಂಘಟನೆ
ಸಿದ್ದಾಪುರ: ರಕ್ತದ ಅಭಾವಕ್ಕೆ ಒಳಗಾಗಿರುವ ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಮೇಲ್ವಿಚಾರಕರ ಕರೆಗೆ ತಕ್ಷಣ ಸ್ಪಂದಿಸಿದ ಸಿದ್ದಾಪುರದ ಎಸ್.ಕೆ.ಎಸ್.ಎಸ್.ಎಫ್.ಸಂಘಟನೆ ತುರ್ತಾಗಿ 61ಮಂದಿಯಿಂದ ರಕ್ತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿಯ ಕೊಡಗು ಬ್ಲೆಡ್ ಡೋನೆರ್ಸ್ ನ ಕಾರ್ಯದರ್ಶಿ ಮೈಕೆಲ್ ವೇಗಸ್ ರವರು ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಯ ಸಿದ್ದಾಪುರ ಶಾಖೆಯ ಪ್ರಮುಖರಿಗೆ ಕರೆಮಾಡಿ ತೀವ್ರ ರಕ್ತದ ಅಭಾವ ಸೃಷ್ಟಿಯಾಗಿರುವುದಾಗಿ ತಿಳಿಸಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಸಂಘಟನೆ ಸದಸ್ಯರು 60ಮಂದಿಯಿಂದ ರಕ್ತದಾನ ಮಾಡಿಸುವ ಮೂಲಕ ಸ್ಪಂದಿಸಿದ್ದಾರೆ. ಸಿದ್ದಾಪುರ ಮುನ್ವರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ರಕ್ತ ದಾನ ಶಿಬಿರ ನಡೆಯಿತು .
ಮಸೀದಿಯ ಖತೀಬ್ ನೌಫಲ್ ಹುದವಿ ಸೇರಿದಂತೆ ಮದರಸ ಅಧ್ಯಾಪಕರುಗಳು ಹಾಗೂ ಸಂಘಟನೆ ಸದಸ್ಯರುಗಳು ಮತ್ತು ಸ್ಥಳೀಯರು ಸೇರಿ ರಕ್ತ ದಾನಮಾಡುವ ಮೂಲಕ ಮಾನವೀಯತೆ ಮೆರೆದರು. ಜಿಲ್ಲಾ ರಕ್ತ ನಿಧಿ ಘಟಕದಲ್ಲಿ ರಕ್ತದ ಅಭಾವ ಕಂಡು ಬಂದ ಹಿನ್ನೆಲೆ ಸಿದ್ದಾಪುರದಲ್ಲಿ ತುರ್ತಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲಿಬೆಟ್ಟ ಚೇಶೈರ್ ಹೋಂ ವಿಶೇಷ ಶಾಲೆಯ ವಿದ್ಯಾರ್ಥಿ ಸಿದ್ದಾಪುರದ ಅಸೀಸ್ ಸ್ವಯಂಪೇರಿತವಾಗಿ ಬಂದು ರಕ್ತದಾನ ಮಾಡುವುದರ ಮೂಲಕ ಮಾದರಿಯಾದರೂ ವಿದ್ಯಾರ್ಥಿಯ ಕಾಳಜಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಮೈಕಲ್ ವೇಗಸ್ ಮಾತನಾಡಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಅಭಾವ ಕಂಡುಬಂದಿದ್ದು ತಕ್ಷಣ ವಿವಿಧ ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿತ್ತು. ಸಿದ್ದಾಪುರದ ಎಸ್ ಕೆ ಎಸ್ ಎಸ್ ಎಫ್ ಸಂಘಟನೆ ಸುಮಾರು 61 ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಮಾದರಿಯಾಗಿದ್ದಾರೆ. ಎಂದು ಸಂಘಟನಾ ಸೇವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದಾಪುರ ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಅಸ್ಕರ್ ಮಾತನಾಡಿ ಬ್ಲಡ್ ಡೋನರ್ಸ್ ಸಂಸ್ಥೆ ವತಿಯಿಂದ ತುರ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು ಕೇಳಿಕೊಂಡಿದ್ದರು ತಕ್ಷಣ ಸ್ಥಳೀಯರಲ್ಲಿ ಮಾಹಿತಿ ನೀಡಿ ರಕ್ತದಾನ ಶಿಬಿರ ನಡೆಸುವ ಮೂಲಕ ಮದರಸ ಅಧ್ಯಾಪಕರುಗಳು ಸೇರಿದಂತೆ ಸ್ಥಳೀಯರು, ಸಂಘದ ಪ್ರಮುಖರು ಸೇರಿ 61 ಮಂದಿ ರಕ್ತದಾನ ಮಾಡಿ ಸಹಕರಿಸಿದ್ದಾರೆ ಎಂದರು.
ಈ ಸಂದರ್ಭ ಮುಸ್ಲಿಂ ಜಮಾಅತ್ ಕಮಿಟಿಯ ರೌವೂಫ್ ಹಾಜಿ,ಖತೀಬ್ ನೌಫಲ್ ಹುದವಿ, ಅರಿಫ್ ಫೈಜಿ, ಅಬೂಬಕ್ಕರ್ ವಾಫಿ, ಜಬ್ಬಾರ್ ಫೈಜಿ, ಸಹದ್ ಫೈಜಿ, ಮೊಯ್ದೀನ್, ಹನೀಫ್, ಅಸ್ಕರ್, ನವಾಸ್, ಅಯಾಸ್, ಬಸೀರ್ ,ಸರ್ಪೂದೀನ್ ಸೇರಿದಂತೆ ರಕ್ತ ನಿಧಿ ಘಟಕದ ಸಿಬ್ಬಂದಿಗಳು ಹಾಜರಿದ್ದರು.