ಸಹರಾ ಕ್ಲಬ್ ನಿರಂತರ ಪ್ರಯತ್ನ ಮತ್ತು ಒತ್ತಡದಿಂದ ಗುಂಡೂರಾವ್ ಬಡಾವಣೆಯಲ್ಲಿ ಆಟದ ಮೈದಾನ

Apr 25, 2026 - 10:35
Apr 25, 2026 - 10:41
 0  48
ಸಹರಾ ಕ್ಲಬ್ ನಿರಂತರ ಪ್ರಯತ್ನ ಮತ್ತು ಒತ್ತಡದಿಂದ ಗುಂಡೂರಾವ್ ಬಡಾವಣೆಯಲ್ಲಿ ಆಟದ ಮೈದಾನ
ಫೋಟೋ: ಜಯವರ್ಧನ & ಪ್ರಮೋದ್ ಮುತ್ತಪ್ಪ

ಕುಶಾಲನಗರ:ಇಲ್ಲಿನ ಗುಂಡೂರಾವ್ ಬಡಾವಣೆಯಲ್ಲಿ ಆಟದ ಮೈದಾನಕ್ಕೆ ಸಹರಾ ಕ್ಲಬ್ ‌ಕುಶಾಲನಗರದ ಸದಸ್ಯರ ನಿರಂತರವಾಗಿ ಪ್ರಯತ್ನಿಸಿದ ಫಲವಾಗಿ ಮೈದಾನವಾಗಿದೆ ಎಂದು ಸಂಘದ ಪ್ರಮುಖ ಸುಮೈರ್ ತಿಳಿಸಿದ್ದಾರೆ.

ಅಂದಿನ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಜಯವರ್ಧನ(ಕೇಶವ) ಹಾಗೂ ಸದಸ್ಯರಾಗಿದ್ದ ಪ್ರಮೋದ್ ಮುತ್ತಪ್ಪ ಅವರು ಗುಂಡೂರಾವ್ ಬಡಾವಣೆಯಲ್ಲಿ ಆಟದ ಮೈದಾನ ಒದಗಿಸಲು ಎಲ್ಲಾ‌ ರೀತಿಯಲ್ಲಿ ಪ್ರಯತ್ನಿಸಿ ಯಶಸ್ಸು ಕಂಡಿದ್ದಾರೆ. ಇವರಿಗೆ ಬೆಂಬಲವಾಗಿ ನಿಂತು ಸಹರಾ ಕ್ಲಬ್ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯವರ ಮೇಲೆ ನಿರಂತರವಾಗಿ ಒತ್ತಡ ಹಾಕಿ‌ ಮೈದಾನ ಮಾಡುವಲ್ಲಿ ಯಶಸ್ಸು ಕಂಡಿದ್ದೇವೆ ಎಂದು ಸುಮೈರ್ ತಿಳಿಸಿದ್ದಾರೆ.

ಅದಲ್ಲದೇ ಮುಂದಿನ ದಿನಗಳಲ್ಲಿ ಆಟದ ಮೈದಾನವನ್ನು ಉಳಿಸುವಲ್ಲಿ ಕೂಡ ಸಹರಾ ಕ್ಲಬ್ ನಿರಂತರವಾದ ಹೋರಾಟ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸುಮೈರ್ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0