ಸಿದ್ದಾಪುರ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಅಸ್ಸಿರಾತುಲ್ ಮುಸ್ತಖೀಮ್ ಆದರ್ಶ ಶಿಬಿರ

ಸಿದ್ದಾಪುರ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಅಸ್ಸಿರಾತುಲ್ ಮುಸ್ತಖೀಮ್ ಆದರ್ಶ ಶಿಬಿರ

ಸಿದ್ದಾಪುರ:ಶಂಸುಲ್ ಉಲಮಾ ಮದರಸ ಒಂಟಿಯಂಗಡಿ(ಅಭ್ಯತ್ ಮಂಗಳ) ಆವರಣದಲ್ಲಿ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಆರಿಫ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ಅಸ್ಸಿರಾತುಲ್ ಮುಸ್ತಖೀಮ್ ಆದರ್ಶ ಶಿಬಿರ ನಡೆಯಿತು. ನೌಫಲ್ ಹುದವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಸಮಸ್ತ ಮುದರ್ರಿಬ್ ಮೊಹಮ್ಮದ್ ಅಲಿ ಫೈಝಿ ಅವರು ಮಾತನಾಡಿ, ಪ್ರವಾದಿ ಮೊಹಮ್ಮದ್ ಅವರು ಜನ್ಮತಾಳಿದ ತಿಂಗಳು ಸಮೀಪಿಸುತ್ತಿದ್ದು, ಎಲ್ಲರೂ‌ ಪ್ರವಾದಿಯವರ ಜೀವನ ಚರಿತ್ರೆಯನ್ನು ಪಾಲಿಸಿಕೊಂಡು ಜೀವನ ನಡೆಸಲು ಕರೆ ನೀಡಿದರು.

ಸಿರಾತುಲ್ ಮುಸ್ತಕೀಮ್ ಇದರ ವಿಷಯ ಮಂಡಿಸಿದ, ಸುಂಟಿಕೊಪ್ಪ ಜೂನಿಯರ್ ಕಾಲೇಜು ಪ್ರಾಂಶುಪಾಲರಾದ ಝನುದ್ದೀನ್ ಫೈಝಿ,ಎಲ್ಲರೂ ಅಹ್ಲುಸುನ್ನತ್ ವಲ್ ಜಮಾಅತ್ ಆದರ್ಶವನ್ನು ಪಾಲಿಸಿಕೊಂಡು, ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಸ್ಥಳೀಯ ಖತೀಬ್ ರಫೀಕ್ ಬಾಖವಿ, ಮುಸ್ತಫಾ ಒಂಟಿಯಂಗಡಿ, ರಹೂಫ್ ಹಾಜಿ ಇದ್ದರು.ಕಾರ್ಯವನ್ನು ರೇಂಜ್ ಕಾರ್ಯದರ್ಶಿ.ಬಷೀರ್ ಅಲ್ ಹಸನಿ ಸ್ವಾಗತಿಸಿ, ಸಿದ್ದೀಕ್ ವಾಫಿ ವಂದಿಸಿದರು.