ಸೋಮವಾರಪೇಟೆ: ನಾಟಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಯದುವೀರ್
ಸೋಮವಾರಪೇಟೆ :- ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವಿರ್ ಒಡೆಯರ್ ಅವರು ಸೋಮವಾರಪೇಟೆ ತಾಲ್ಲೂಕಿನ ಹುದಗೂರು ಗ್ರಾಮದ ಯಂಗ್ ಇಂಡಿಯನ್ ಗದ್ದೆಯಲ್ಲಿ ಫಾರ್ಮಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ನಾಟಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಿಪಾ ಸಂಘಟನೆಯ ಜಿಲ್ಲಾಧ್ಯಕ್ಷ, ವಕೀಲ ಶ್ರೀನಿಧಿ ಲಿಂಗಪ್ಪ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಗದ್ದೆಗಿಳಿದು ಸಂಸದ ಯದುವೀರ್ ಒಡೆಯರ್ ಅವರು ನಾಟಿ ಮಾಡಿ ಸಂಭ್ರಮಿಸಿದರು. ನಾಟಿ ನಂತರ ಸಂಭ್ರಮದ ಕ್ಷಣಗಳನ್ನು ರೈತರೊಂಗಿಗೆ ಹಂಚಿಕೊಂಡು ಯದುವಿರ್ ಒಡೆಯರ್ ಸಂಭ್ರಮಪಟ್ಟರು.