ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ:ನೀರು ಸರಬರಾಜು ಮಂಡಳಿ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು
ಸೋಮವಾರಪೇಟೆ: ಪಟ್ಟಣದ ಅಮೃತ್ ಯೋಜನೆಯ ಬಗ್ಗೆ ಪ.ಪಂ.ಸದಸ್ಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಸರಬರಾಜು ಮಂಡಳಿ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರಪೇಟೆ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಪಟ್ಟಣದ ರಸ್ತೆಗಳೆಲ್ಲಾ ಗುಂಡಿಮಯವಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ನಿಗದಿತ ಅವಧಿ ಮುಗಿದರೂ ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ನಿಮ್ಮ ಅಸಡ್ಡೆಯಿಂದ ಏನಾದರೂ ಅನಾಹುತವಾದರೆ ನೀವು ಜವಾಬ್ದಾರಿ,ಮುಖ್ಯಾಧಿಕಾರಿ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ. ಮುಂದಿನ 15 ದಿನಗಳಲ್ಲಿ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದು, ಆಗಸ್ಟ್ ತಿಂಗಳಿಗೆ ಅವಧಿ ಮುಗಿದಿರುವುದರಿಂದ,ನಿಮ್ಮ ತಪ್ಪಿಗೆ ಪಂಚಾಯ್ತಿ ಹೆಚ್ಚುವರಿ ಹಣ ಪಾವತಿಸುವುದಿಲ್ಲ ಮುಖ್ಯಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ.