ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ದೊರಕಲೆಂದು ಕೆದಮುಳ್ಳೂರು ವಲಯ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ

Jun 3, 2026 - 14:17
Jun 3, 2026 - 14:19
 0  443
ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ದೊರಕಲೆಂದು ಕೆದಮುಳ್ಳೂರು ವಲಯ ಕಾಂಗ್ರೆಸ್  ವತಿಯಿಂದ ವಿಶೇಷ ಪೂಜೆ

ವಿರಾಜಪೇಟೆ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತಿರುವ, ಜನಪರ ನಾಯಕ ಬಡವರ ಬಂದು, ಪಕ್ಷಬೇದ ಮರೆತು ಎಲ್ಲಾ ಧರ್ಮ ಜಾತಿ ಜನಾಂಗಕ್ಕೂ ನ್ಯಾಯಯುತವಾಗಿ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ, ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರಕಲೆಂದು ಕೆದಮುಳ್ಳೂರು ವಲಯ ಕಾಂಗ್ರೆಸ್ ವತಿಯಿಂದ, ಕೆದಮೂಳ್ಳೂರು ಶ್ರಿ ಮಹಾದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

  ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

   ಈ ಸಂದರ್ಭ ಕೆದಮುಳ್ಳೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಡಿಕೇರಿಯಂಡ ಮಹೇಶ್. ಕೆಡಿಪಿ ಸದಸ್ಯರಾದ ಮಾಳೆಟಿರ ಪ್ರಶಾಂತ್ ಉತ್ತಪ್ಪ. ನಿಕಟಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಳೆಟಿರ ಜಫ್ರಿ ಉತ್ತಪ್ಪ. ನಿಕಟಪೂರ್ವ ಗ್ರಾಮ ಪಂಚಾಯತ್ ಸದಸ್ಯರಾದ ಮೀತಲ್‌ತಂಡ ಇಸ್ಮಾಯಿಲ್. ಬೂತ್ ಸಮಿತಿ ಅಧ್ಯಕ್ಷ ಮಾಳೆಟಿರ ಶುಭ ಸುಬ್ಬಯ್ಯ, ಕರಿನೆರವಂಡ ಜಾಲು ಚಂಗಪ್ಪ, ಪಕ್ಷದ ಮುಖಂಡರುಗಳಾದ ಕರಿನೆರವಂಡ ಮಿಟ್ಟು ಅಯ್ಯಪ್ಪ, ಮಾಳೆಟಿರ ಗಣೇಶ್, ಕರಿನೆರವಂಡ ಜಿತನ್, ದೀಪಕ್, ಮಾಳೆಟಿರ ವಿಜಯ್ ಮಂದಣ್ಣ, ಮಾಳೆಟಿರ ಪೊನ್ನಪ್ಪ ಪೊನ್ನು, ಮಾಳೆಟಿರ ರಾಮು ಸುಬ್ರಾಯ, ಮಾಳೆಟಿರ ಜೀವನ್, ರಜಾಕ್, ಸಹದೇವ್ ಬಿ.ಕೆ ಮೇದುರ ಗಪುö್ಪ, ಪುದಿನೆರವನ ಡಾಲು, ಕೋರಿಯಾರು ಪುಟ್ಟುಸ್ವಾಮಿ, ಮುಲ್ಲೇರಿರ ರಘು, ಸುದೀಪ್, ದೇವಸ್ಥಾನದ ಅರ್ಚಕರಾದ ರಾಧಾಕೃಷ್ಣರವರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0