ಜೀವಭಯದಲ್ಲೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು:ಕಾಡಾನೆ ಕಂಡು ಭಯಭೀತರಾದ ಶಿಕ್ಷಕರು
ಸಿದ್ದಾಪುರ:ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು ಕಾಡಾನೆ ಭಯದಲ್ಲೇ ಸಮೀಕ್ಷೆ ನಡೆಸುತ್ತಿರುವ ಪರಿಸ್ಥಿತಿ ಎದುರಾಗಿದೆ.
ಸಮೀಕ್ಷೆ ನಡೆಸುತ್ತಿರುವ ಸಂದರ್ಭ ಶಿಕ್ಷಕರು ಕಾಡಾನೆ ಕಂಡು ಭಯಭೀತರಾಗಿರುವ ಘಟನೆ,ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ನಡೆದಿದೆ. ಹೆರೂರು,ಕರಡಿಗೋಡು,ಬೀಟಿಕಾಡು,ಬಿಬಿಟಿಸಿ ಹಾಗೂ ಶಿಲ್ಪಿ ಎಸ್ಟೇಟ್ ನಲ್ಲಿ ಗಣತಿ ನಡೆಸುತ್ತಿರುವ ಶಿಕ್ಷಕರು ಕಾಡಾನೆ ಭಯದಿಂದ ಸಮೀಕ್ಷೆ ನಡೆಸುತ್ತಿದ್ದಾರೆ. ಈ ಬಗ್ಗೆ ಹಾತೂರು ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.