ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ ವಾಲ್ಮೀಕಿ ವಸತಿ ಶಾಲೆಯ ಶಿಕ್ಷಕರು
ವಿರಾಜಪೇಟೆ: ಈ ಹಿಂದೆ ವಾಲ್ಮೀಕಿ ಶಾಲೆಯ ಹೊರಗುತ್ತಿಗೆ ನೌಕರರು ತಮ್ಮ ಹಲವು ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಗಮನಕ್ಕೆ ತಂದಿದ್ದರು. ಮುಖ್ಯಮಂತ್ರಿಗಳ ಬಳಿಗೆ ನಿಯೋಗದೊಂದಿಗೆ ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಶಾಸಕರ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಲು, ಇಂದು ಹೊರಗುತ್ತಿಗೆ ನೌಕರರ ಪರವಾಗಿ ಆಗಮಿಸಿದ ಮೂರ್ತಿ ಹಾಗು ಚೈತ್ರ ರವರು, ಶಾಸಕರಿಗೆ ಆ ಸಂದರ್ಭದ ಫೋಟೋ ನೀಡುವ ಮೂಲಕ ಗೌರವಿಸಿದರು.