ಆಗಸ್ಟ್ 21ರಂದು(ನಾಳೆ) ದಕ್ಷಿಣ ಕೊಡಗಿನ ವಿವಿಧೆಡೆ ಕರೆಂಟ್ ಇರಲ್ಲ

ಆಗಸ್ಟ್ 21ರಂದು(ನಾಳೆ) ದಕ್ಷಿಣ ಕೊಡಗಿನ ವಿವಿಧೆಡೆ ಕರೆಂಟ್ ಇರಲ್ಲ

ಪೊನ್ನಂಪೇಟೆ:66/11ಕೆ.ವಿ ಪೊನ್ನಂಪೇಟೆ ಹಾಗೂ ಶ್ರೀಮಂಗಲ ವಿದ್ಯುತ್ ಉಪಕೇಂದ್ರದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಸದರಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ದಿನಾಂಕ 21.08.2025 ರಂದು ಬೆಳಿಗ್ಗೆ 10.00ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದ್ದು, F1 ನಲ್ಲೂರು, F2 ಬಾಳೆಲೆ, F4 ತಿತಿಮತಿ, F5 ಪಾಲಿಬೆಟ್ಟ, F6 ಬೇಗೂರು, F7 ಗೋಣಿಕೊಪ್ಪ, FB ಪೊನ್ನಂಪೇಟೆ, F9 ಹಾತೂರು, F10 ಹೈಸೊಣ್ಣೂರು, F1 ಬಿರುನಾಣಿ, F2 ಕುಟ್ಟ, F3 ಶ್ರೀಮಂಗಲ, F4 ಕಾನೂರು, F5 ಕೆ.ಬಾಡಗ, F6 ಬೀರುಗ, F7 ಟಿ.ಶೆಟ್ಟಿಗೇರಿ, ಸದರಿ ಫೀಡರ್‌ಗಳಿಂದ ಹೊರಹೊಮ್ಮುವ ಸುಳುಗೋಡು, ಕೋಣನಕಟ್ಟೆ, ಕೊಟ್ಟಗೇರಿ, ದೇವನೂರು, ಕಿರಗೂರು, ನಿಟ್ಟೂರು, ಜಾಗಲೆ, ಅರವತೋಕ್ಲು, ದೇವರಪುರ, ಕಾಯಿಮನೆ, ಮಂಚಳ್ಳಿ, ಪೂಜೆಕಲ್ಲು, ನಲ್ಲೂರು, ನಾಥಂಗಾಲ, ತೈಲ, ಸಿಂಕೋನ, ನಾಲ್ಕೆರಿ, ಶೆಟ್ಟಿಗೇರಿ, ತಾವಳಗೇರಿ, ಕಾಕೂರು, ಕುರ್ಚಿ, ತೆರಾಲು, ಪರಕಟಕೇರಿ, ಹೊಸಕೇರಿ, ಕೆ.ಎಂ ಕೊಲ್ಲಿ, ಹರಿಹರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.