ಪಂಚವಳ್ಳಿ ಬಳಿ ಗ್ರಾಮಸ್ಥರಿಂದ ರಸ್ತೆ ತಡೆ: ರಾಜ್ಯ ಹೆದ್ದಾರಿ ಸಮೀಪವೇ ಹುಲಿ ದಾಳಿಗೆ ಹಸು ಬಲಿ

Apr 27, 2026 - 19:22
 0  339
ಪಂಚವಳ್ಳಿ ಬಳಿ ಗ್ರಾಮಸ್ಥರಿಂದ ರಸ್ತೆ ತಡೆ: ರಾಜ್ಯ ಹೆದ್ದಾರಿ ಸಮೀಪವೇ ಹುಲಿ ದಾಳಿಗೆ ಹಸು ಬಲಿ

ಗೋಣಿಕೊಪ್ಪ:ಮೈಸೂರು ರಾಜ್ಯ ಹೆದ್ದಾರಿ ಪಂಚವಳ್ಳಿ ಸಮೀಪದ ಎಂ.ಎಸ್.ಆರ್ ಹಳ್ಳಿ ರಸ್ತೆ ಬದಿ ಹುಲಿ ದಾಳಿಗೆ ಹಸು ಒಂದು ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಂಬಂಧ ಗ್ರಾಮಸ್ಥರು ರಸ್ತೆ ತಡೆ ನಡೆಸಿದ್ದಾರೆ.

 ಇದೀಗ ರಾಜ್ಯ ಹೆದ್ದಾರಿ ಸಂಪೂರ್ಣ ವಾಹನಗಳ ಸಂಚಾರಕ್ಕೆ ತಡೆಯಾಗಿದೆ. ರಸ್ತೆ ಬದಿ ಮೂರು ಹುಲಿಗಳು ಸಂಚರಿಸುತ್ತಿರುವುದನ್ನು ಅಲ್ಲಿನ ಗ್ರಾಮಸ್ಥರು ನೋಡಿದ್ದಾಗಿದ್ದು ಒಂದು ಹುಲಿ ಹಸುವಿನ ಮೇಲೆ ದಾಳಿ ನಡೆಸಿ ರಸ್ತೆ ಬದಿಯಲ್ಲಿ ಕೊಂದು ಹಾಕಿದೆ. ಆಕ್ರೋಶಬರಿತ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿ ಟಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಯಾವುದೇ ಪೊಲೀಸರು, ಅಧಿಕಾರಿಗಳು ಬಾರದಿರುವ ಬಗೆ ಅಲ್ಲಿನ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0